ಜಿಲ್ಲೆ

ಮಾದಕ ವಸ್ತು ಸೇವನೆ 6 ಮಂದಿಯ ಬಂಧನ

ಮಂಗಳೂರು: ನಗರದ ವಿವಿಧ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ ಸೇವನೆ ಮಾಡಿದ ಆರೋಪದಲ್ಲಿ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ಕಂಡತ್​ಪಳ್ಳಿ ಸಾರ್ವಜನಿಕ ರಸ್ತೆ ಬದಿ ಮಾದಕ ಸೇವನೆ ಮಾಡಿದ ಆರೋಪದಲ್ಲಿ ಬಂದರು ನಿವಾಸಿ ಅಮೀರ್​ ಸುಹೇಲ್​(28) ಬಂಧಿಸಲಾಗಿದೆ. ಆರೋಪಿ ಡಿ.19ರಂದು 6.30ರ ವೇಳೆಗೆ ಅಮಲು ಪದಾರ್ಥ ಸೇವಿಸಿ ತೂರಾಡುತ್ತಿದ್ದ. ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದಾಗಿ ತಿಳಿಸಿದ್ದಾನೆ. ಆತನನ್ನು ವೈದ್ಯಕಿಯ ತಪಾಸಣೆಗೊಳಪಡಿಸಿದಾಗ ಮಾದಕ ಸೇವನೆ ಮಾಡಿರುವುದು ದೃಢಪಟ್ಟಿದೆ. ಬಂದರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಸೈಮನ್​ಲೇನ್​ ಕ್ರಾಸ್​ ಬಳಿ ಮಾದಕ ಸೇವನೆ ಮಾಡಿದ ಆರೋಪದಲ್ಲಿ ರಾಹುಲ್​ ಎಂಬಾತನನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಡಿ.18ರಂದು ರಾತ್ರಿ 7.35ರ ವೇಳೆಗೆ ಆರೋಪಿ ಮಾದಕ ವ್ಯಸನ ಮಾಡಿರುವ ಬಗ್ಗೆ ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ವೈದ್ಯಕಿಯ ತಪಾಸಣೆ ನಡೆಸಲಾಗಿದೆ. ಆರೋಪಿಯು ನಿಷೇಧಿತ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.

ನಗರದ ಸುಲ್ತಾನ್​ ಬತ್ತೇರಿ ಬಳಿ ಮಾದಕ ಸೇವನೆ ಮಾಡಿದ ಆರೋಪದಲ್ಲಿ ಕೇರಳ ಕೊಲ್ಲಂ ನಿವಾಸಿ ಅನಾಸ್​ ಮೊಹಮ್ಮದ್​(21) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ವೈದ್ಯಕಿಯ ತಪಾಸಣೆ ನಡೆಸಿದಾಗ ಮಾದಕ ಸೇವನೆ ಮಾಡಿರುವುದು ದೃಢಪಟ್ಟಿದೆ. ರ್ಬಕೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾಮಂಜೂರಿನ ಕಾಲೇಜೊಂದರ ಬಳಿ ಮಾದಕ ವಸ್ತು ಸೇವನೆ ಮಾಡಿದ ಆರೋಪದಲ್ಲಿ ಬಜ್ಪೆ ನಿವಾಸಿ ಮೊಹಮ್ಮದ್​ ರಾಜಿ(22) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಡಿ.19ರಂದು ರಾತ್ರಿ 7.05ರ ವೇಳೆಗೆ ಆರೋಪಿ ಮಾದಕ ಸೇವನೆ ಮಾಡಿ ಕಾಲೇಜು ರೋಡ್​ ಬಳಿ ತಿರುಗಾಡುತ್ತಿದ್ದ. ಈತನನ್ನು ವೈದ್ಯಕಿಯ ತಪಾಸಣೆ ನಡೆಸಿದಾಗ ಮಾದಕ ಸೇವನೆ ಮಾಡಿರುವುದು ದೃಢಪಟ್ಟಿದೆ.

ದಂಬೆಲ್​ ನದಿ ತೀರದಲ್ಲಿ ಮಾದಕ ಸೇವನೆ ಮಡಿದ ಆರೋಪದಲ್ಲಿ ಕೇರಳ ಕಣ್ಣೂರು ನಿವಾಸಿ ಅಭಿನವ್​ ಕೆ.ಪಿ. ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ದಂಬೆಲ್​ ನದಿ ಕಿನಾರೆಯ ಸಾರ್ವಜನಿಕ ರಸ್ತೆ ಬದಿಯಲ್ಲಿ ಸಿಗರೇಟು ಸೇದುತ್ತಾ ನಿಂತಿದ್ದ. ಈತನನ್ನು ವಿಚಾರಿಸಿದಾಗ ಮಾದಕ ಸೇವನೆ ಮಾಡಿರುವುದನ್ನು ಒಪ್ಪಿದ್ದಾನೆ. ಬಳಿಕ ವೈದ್ಯಕಿಯ ಸೇವನೆಯಲ್ಲೂ ಮಾದಕ ಸೇವನೆ ಮಾಡಿರುವುದು ದೃಪಟ್ಟಿದೆ. ಉರ್ವ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.