ಚಿತ್ರದುರ್ಗ: ಜಿಲ್ಲಾಡಳಿತ,ಜಿಪಂ ಹಾಗೂ ಶಿಕ್ಷಣಇಲಾಖೆ ಸಹಯೋಗದಲ್ಲಿ ಸೆ.5ರಂದು ಬೆಳಗ್ಗೆ 10.30ಕ್ಕೆ ನಗರದ ತರಾಸು ರಂಗಮಂದಿರದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನೋತ್ಸವದ ಅಂಗವಾಗಿ ಶಿಕ್ಷಕರ ದಿನವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ.
ಕೇಂದ್ರ ಸಚಿವ ಸಚಿವ ಎ.ನಾರಾಯಣಸ್ವಾಮಿ ಅವರು ಘನ ಉಪಸ್ಥಿತಿ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸ ಮಾರಂಭವನ್ನು ಉದ್ಘಾ ಟಿಸುವರು. ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಅವರು ಅಧ್ಯಕ್ಷತೆ ವಹಿಸುವರು. ಶಾಸಕರು,ವಿಧಾನ ಪರಿಷತ್ ಸದಸ್ಯರು, ಅಧಿಕಾರಿಗಳು ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿರುತ್ತಾರೆ.
ಬೆಳಗ್ಗೆ 8.30ಕ್ಕೆ ಕಲಾ ತಂಡಗಳೊಂದಿಗೆ ನಗರದ ಶ್ರೀ ನೀಲಕಂಠೇಶ್ವರ ದೇವಸ್ಥಾನದಿಂದ ರಂಗಮಂದಿರದವರೆಗೆ ಏರ್ಪಡಿಸಿರುವ ಮೆರವಣಿಗೆಯಲ್ಲಿ ಎಲ್ಲ ಶಿಕ್ಷಕರು ಭಾಗವಹಿಸಬೇಕೆಂದು ಡಿಡಿಪಿಐ ಕೆ.ರವಿಶಂಕರ್‌ರೆಡ್ಡಿ ಕೋರಿದ್ದಾರೆ.
25 ಶಿಕ್ಷಕರಿಗೆ ಪ್ರಶಸ್ತಿ
ಸಮಾರಂಭದಲ್ಲಿ 18 ಶಿಕ್ಷಕರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಹಾಗೂ 7 ಶಿಕ್ಷಕರಿಗೆ ಜಿಲ್ಲಾ ಮಟ್ಟದ ವಿಶೇಷ ಪ್ರಶಸ್ತಿಗಳನ್ನು ಪ್ರ ದಾನ ಮಾಡಲಾಗುತ್ತದೆ.
ಪ್ರೌಢಶಾಲೆ ವಿಭಾಗ
ಚಳ್ಳಕೆರೆ ತಾಲೂಕು ಹಿರೇಹಳ್ಳಿ ಶ್ರೀ ಚಿಂತಾಮಣೇಶ್ವರಿ ಗ್ರಾಮಾಂತರ ಪ್ರೌಢಶಾಲಾ ಶಿಕ್ಷಕಿ ಎಚ್.ಕೆ.ರಶ್ಮಿ,ಹೊಸದುರ್ಗ ಸರ್ಕಾರಿ ಪ ಪೂ ಕಾಲೇಜು ಶಿಕ್ಷಕ ಕೆ.ಎನ್.ಶ್ರೀಧರಶೆಟ್ಟಿ,ಹೊಳಲ್ಕೆರೆ ತಾಲೂಕು ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮ ಪಪೂ ಕಾಲೇಜು ಶಿಕ್ಷಕ ಬಿ.ಪಿ.ದಕಿ ಣಾ ಮೂರ್ತಿ,ಮೊಳಕಾಲ್ಮೂರು ತಾಲೂಕು ಕೊಂಡ್ಲಹಳ್ಳಿ ಗ್ರಾ.ಪ್ರೌಢಶಾಲೆ ಮುಖ್ಯಶಿಕ್ಷಕ ಸಿಎಂಎಸ್ ತಿಪ್ಪೇಸ್ವಾಮಿ,ಚಿತ್ರದುರ್ಗ ಬಾಲಕರ ಸ ರ್ಕಾರಿ ಪಪೂ ಕಾಲೇಜು ಚಿತ್ರಕಲಾ ಶಿಕ್ಷಕ ಟಿ.ಎಸ್.ಪ್ರಸನ್ನಕುಮಾರ್,ಚಿತ್ರದುರ್ಗ ತಾಲೂಕು ಮಾನಂಗಿ ಶ್ರೀ ಆಂಜನೇಯಸ್ವಾಮಿ ಪ್ರೌಢ ಶಾಲೆ ಶಿಕ್ಷಕಿ ಜಿ.ಪೂರ್ಣಿಮಾ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗ
ಹಿರಿಯೂರು ತಾಲೂಕು ಬಗ್ಗನಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಕೆ.ಎನ್.ರಾಜಪ್ಪ,ಚಳ್ಳಕೆರೆ ತಾಲೂಕು ಸೋಮ ಗುದ್ದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎಂ.ರುದ್ರಮುನಿ,ಹೊಳಲ್ಕೆರೆ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಶಾನ ವಾಜ್‌ಬೇಗಂ,ಹೊಸದುರ್ಗ ತಾಲೂಕು ಮಲ್ಲಪ್ಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಎಚ್.ಮಂಜುಳಾ,ಮೊಳಕಾಲ್ಮೂರು ತಾಲೂಕು ಯರ‌್ರೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಹುಸೇನ್‌ಸಾಬ್,ಚಿತ್ರದುರ್ಗ ತಾಲೂಕು ಹಿದಾಯತ್‌ಪುರ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಆರ್.ಜೆ.ಮೊಹಮ್ಮದ್ ತಾಜೀರ್‌ಬಾಷ.
ಕಿರಿಯ ಪ್ರಾಥಮಿಕ ಶಾಲೆ ವಿಭಾಗ
ಚಳ್ಳಕೆರೆ ತಾಲೂಕು ಖಂಡೇನಹಳ್ಳಿ ಗೊಲ್ಲರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಕೆ.ಜಗನ್ನಾಥ್,ಗುಡ್ಡದ ಕಪಿಲೆ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಟಿ.ಸೌಭಾಗ್ಯ,ಹೊಸದುರ್ಗ ತಾಲೂಕು ಬಾಚಾವರ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಅಜೀಮುಲ್ಲಾಷರೀಫ್, ಮೊಳ ಕಾಲ್ಮೂರು ತಾಲೂಕು ಗುಂಡ್ಲೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಹನುಮಂತಪ್ಪ,ಚಿತ್ರದುರ್ಗ ತಾಲೂಕು ಹಿರೇಗುಂಟನೂ ರು ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆ ಶಿಕ್ಷಕಿ ಆರ್.ಪಾರ್ವತಿಬಾಯಿ,ಅರಬಗಟ್ಟ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಜಿ.ಎಲ್.ಶಿವಕುಮಾರ್.
ವಿಶೇಷ ಪ್ರಶಸ್ತಿ
ಚಿತ್ರದುರ್ಗ ತಾಲೂಕು ಚವಲಹಳ್ಳಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಸಿ.ಜಿ.ಹಾಲೇಶಿ,ತುರುವನೂರು ಸರ್ಕಾರಿ ಪಪೂ ಕಾಲೇಜು ಪ್ರೌಢ ಶಾಲಾ ವಿಭಾಗದ ಶಿಕ್ಷಕ ಶಿವಣ್ಣ,ಲಕ್ಷ್ಮೀಸಾಗರ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಎಸ್.ಗುರುಮೂರ್ತಿ,ಕಡಬನಕಟ್ಟೆ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆ ಶಿಕ್ಷಕ ಎಂ.ವಿಶ್ವನಾಥ,ಚಳ್ಳಕರೆ ತಾಲೂಕು ಜಾಗನೂರಹಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ರಾಮಚಂದ್ರ ಮರೆಕ್ಕ ನವರ,ಕಸವಿಗೊಂನಹಳ್ಳಿ ಗೊಲ್ಲರಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ತಿಪ್ಪೇಸ್ವಾಮಿ ಹಾಗೂ ಮೊಳಕಾಲ್ಮೂರು ತಾಲೂಕು ರಾಂಪುರ ಬಸವೇಶ್ವರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಬಿ.ಟಿ.ರವಿ.