ಜಿಲ್ಲೆ

5ನೇ ತರಗತಿವರೆಗೆ ಆನ್​ಲೈನ್ ಬೇಡ

ಹಿರೇಕೆರೂರ: ಶಾಲೆ ಪುನರಾರಂಭಿಸಲು ಪೋಷಕರ ಅಭಿಪ್ರಾಯ ಸಂಗ್ರಹಣೆ ನಿಮಿತ್ತ ಇಲ್ಲಿನ ಶಾಂತಿಧಾಮದ ತರಳಬಾಳು ಸಿ.ಬಿ.ಎಸ್.ಸಿ. ಶಾಲೆಯಲ್ಲಿ ಶುಕ್ರವಾರ ಸಭೆ ಜರುಗಿತು.

ತಾಲೂಕು ವೈದ್ಯಾಧಿಕಾರಿ ಜಡ್.ಆರ್. ಮಕಂದಾರ ಮಾತನಾಡಿ, ಕರೊನಾ ವೈರಸ್​ನಿಂದ ರಕ್ಷಿಸಿಕೊಳ್ಳಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಪೋಷಕರಿಗೆ ತಿಳಿ ಹೇಳಿದರು.

ಸಿ.ಆರ್.ಸಿ.ಯ. ನಾಗರಾಜ್ ಕಾಡಪ್ಪನವರ, ಶಿಕ್ಷಣ ಇಲಾಖೆಯ ಪ್ರಚಲಿತ ನಿಯಮಗಳನ್ನು ಪಾಲಕರಿಗೆ ಮನದಟ್ಟು ಮಾಡಿದರು.

1ರಿಂದ 5ನೇ ತರಗತಿವರೆಗೆ ಆನ್​ಲೈನ್ ತರಗತಿಗಳು ಬೇಡ. 6ರ ನಂತರದ ತರಗತಿಗಳಿಗೆ ಆನ್​ಲೈನ್ ತರಗತಿ ನಡೆಸಿಕೊಟ್ಟರೆ ಅನುಕೂಲ ಎಂದು ಪಾಲಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಇದಕ್ಕೆ ಸಮ್ಮತಿಸಿದ ಪ್ರಾಚಾರ್ಯ ಸಿ.ಎಚ್. ನಂದಿಹಳ್ಳಿ ಪಾಲಕರ ಸಲಹೆ ಹಾಗೂ ಇಲಾಖೆಯ ನಿಯಮಗಳನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಶಿಕ್ಷಕ ವೀರನಗೌಡ ಲಿಂಗದಹಳ್ಳಿ ನಿರ್ವಹಿಸಿದರು.