ಜಿಲ್ಲೆ

5ನೇ ಅತ್ಯುತ್ತಮ ವಿಜ್ಞಾನ ಮಾದರಿ

ಚಿತ್ರದುರ್ಗ: ಶಿಕ್ಷಣ ಇಲಾಖೆ ಪಾಂಡಿಚೇರಿಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ನಗರದ ವಿದ್ಯಾವಿಕಾಸ ವಿದ್ಯಾಸಂಸ್ಥೆ ಐಸಿಎಸ್‌ಸಿ ವಿಭಾಗದ 9ನೇ ತರಗತಿಯ ಟಿ. ಜಾಗೃತ್ ಹಾಗೂ ಎಸ್. ಹರ್ಷವರ್ಧನ್ ಪ್ರದರ್ಶಿಸಿದ ಬಹುಪಯೋಗಿ ಆಧುನಿಕ ಎತ್ತಿನಗಾಡಿ ವಿಜ್ಞಾನ ಮಾದರಿ ದಕ್ಷಿಣ ಭಾರತ ರಾಜ್ಯಗಳ ವಿಭಾಗದಲ್ಲಿ 5ನೇ ಅತ್ಯುತ್ತಮ ಮಾದರಿ ಪ್ರಶಸ್ತಿಗೆ ಆಯ್ಕೆಯಾಗಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆ ಕಾರ್ಯದರ್ಶಿ ಬಿ. ವಿಜಯ್‌ಕುಮಾರ್, ವ್ಯವಸ್ಥಾಪಕ ನಿರ್ದೇಶಕ ಎಸ್.ಎಂ. ಪೃಥ್ವೀಶ, ನಿರ್ದೇಶಕಿ ಪಿ.ಸಿ. ಸುನಿತಾ, ಬೋಧಕ ಹಾಗೂ ಬೋಧಕೇತರ ವರ್ಗ ಹರ್ಷ ವ್ಯಕ್ತಪಡಿಸಿದೆ.