ಹಗರಿಬೊಮ್ಮನಹಳ್ಳಿ: ಪಟ್ಟಣದ ಆರ್ಯವೈಶ್ಯ ಮಹಿಳಾ ಸಂಘದಿಂದ ಕನ್ಯಕಾಪರಮೇಶ್ವರಿ ಪುರಾಣ ಪಾರಾಯಣ ಮಾಡುವ ಸಂಕಲ್ಪ ಮಾಡಲಾಯಿತು.
ಪಟ್ಟಣದ ಕನ್ಯಕಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಮಹಿಳಾ ಸಂಘ ಹಾಗೂ ವಾಸವಿ ವನಿತಾ ಸಂಘದ ಪದಾಧಿಕಾರಿಗಳು ಸಂಕಲ್ಪ ಮಾಡಿದರು.
ಆರ್ಯವೈಶ್ಯ ಮಹಿಳಾ ಸಂಘದ ಮಾಜಿ ಅಧ್ಯಕ್ಷೆ ಮಾಧವಿ ಚಿದ್ರಿ ಮಾತನಾಡಿ, ಈ ಸಂಕಲ್ಪ 58 ವಾರಗಳದಾಗಿದ್ದು, ತಾಲೂಕು, ಚಾಮರಾಜನಗರ, ಕೊಳ್ಳೆಗಾಲ, ಕೋಲಾರ, ಬೆಂಗಳೂರು, ಹೊಸಪೇಟೆ ಸೇರಿದಂತೆ ರಾಜ್ಯದ ನಾನಾ ಕಡೆಯ 583 ಜನರು ಪಠಣದಲ್ಲಿ ಭಾಗಿಯಾಗಿದ್ದು, ಮಂಗಳವಾರಕ್ಕೊಮ್ಮೆ ಪೂಜೆಯ ಬಳಿಕ ಒಂದು ಅಧ್ಯಾಯ ಪಾರಾಯಣ ಮಾಡತಕ್ಕದ್ದು ಎಂದು ತಿಳಿಸಿದರು.
ಮಹಿಳಾ ಸಂಘದ ತಾಲೂಕು ಅಧ್ಯಕ್ಷೆ ಸವಿತಾ ರಮೇಶ ಬೆಲ್ಲಂಕೊಂಡ, ಪ್ರಮುಖರಾದ ಚಿದ್ರಿ ಪ್ರಶಾಂತಿ, ಹೆಗ್ಡಾಳ್ ಸುಲೋಚನಾ ಶ್ರೀನಿವಾಸ, ಲಕ್ಷ್ಮೀ ಬಂಡ್ರಿ ವಿಶ್ವನಾಥ, ಮಂಜುಳಾ ಪ್ರಭಾಕರ, ಲತಾ ಶ್ರೀನಿವಾಸ, ಹೆಗ್ಡಾಳ್ ಭಾರತಿ, ಮಂಗಾನಹಳ್ಳಿ ಸರಸ್ವತಿ, ಅನ್ನಪೂರ್ಣ, ಶೀಲಾ, ಅನಿತಾ ಜನಾರ್ದನ, ಬನ್ನಿಕಲ್ಲು ಜಯಶ್ರೀ, ಹೆಗ್ಡಾಳ್ ಶ್ರೀನಿವಾಸ ಮತ್ತಿತರರು ಇದ್ದರು.