ಚಿತ್ರದುರ್ಗ: ಜಿಲ್ಲೆಯ ಪೊಲೀಸರು ಕಾರ್ಯಾಚರಣೆ ಮೂಲಕ ಬರೋಬ್ಬರಿ 575 ಜೂಜುಕೋರರನ್ನು ಬಂಧಿಸಿ, ಅವರಿಂದ 7.40 ಲಕ್ಷ ರೂ.ನಗದು ವಶಪಡಿಸಿಕೊಂಡಿದ್ದಾರೆ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಜೂಜು ಅಡ್ಡೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಪೊಲೀಸರು ಮಾ.29ರಿಂದ ಸೋಮವಾರದವರೆಗೆ ಜಿಲ್ಲೆಯ ವಿವಿಧೆಡೆ ಮೂರು ದಿನಗಳ ಕಾಲ ದಾಳಿ ನಡೆಸಿ 108 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಚಿತ್ರದುರ್ಗ ಪೊಲೀಸ್ ಉಪ ವಿಭಾಗದ ನಾನಾ ಠಾಣೆಗಳ ವ್ಯಾಪ್ತಿಯಲ್ಲಿ ದಾಳಿ ನಡೆಸಿ 34 ಪ್ರಕರಣಗಳನ್ನು ದಾಖಲಿಸಿದ್ದಾರೆ. 182 ಆ ರೋಪಿಗಳನ್ನು ಬಂಧಿಸಿ 2.79 ಲಕ್ಷ ರೂ. ನಗದು ವಶಕ್ಕೆ ಪಡೆದಿದ್ದಾರೆ. ಇದೇ ಮಾದರಿಯಲ್ಲಿ ಚಳ್ಳಕೆರೆ-37-203-1.24 ಲಕ್ಷ ರೂ., ಹಿರಿಯೂರು ಪೊಲೀಸ್ ಉಪ ವಿಭಾಗಕ್ಕೆ ಸೇರಿದ ಹಲವು ಠಾಣೆಗಳ ವ್ಯಾಪ್ತಿಯಲ್ಲಿ ಕಾರ‌್ಯಾಚರಣೆ ನಡೆಸಿ 37 ಪ್ರಕರಣಗಳನ್ನು ದಾಖಲಿಸಿದ್ದಾರೆ. 190 ಆರೋಪಿಗಳನ್ನು ಬಂಧಿಸಿ,3.36 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ ಎಂದು ಎಸ್‌ಪಿ ರಂಜಿತ್‌ಕುಮಾರ್‌ಬಂಡಾರು ತಿಳಿಸಿದ್ದಾರೆ.