ಬೆಂಗಳೂರು: ಬೆಂಗಳೂರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಶೂನ್ಯ ಕಾರ್ಯಭಾರ ಹಾಗೂ ಕಾರ್ಯಭಾರ ಕೊರತೆಯಿರುವ 52 ಪ್ರಾಧ್ಯಾಪಕರನ್ನು ಬೇರೆಡೆಗೆ ನಿಯೋಜನೆ ಮಾಡಿ ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ವಿಜಯವಾಣಿ ಮಾ.9ರಂದು ‘ಕೆಲಸವಿಲ್ಲದೆ ಸಂಬಳ ಬಾಚುತ್ತಿರುವ ಪ್ರಾಧ್ಯಾಪಕರು’ ಶೀರ್ಷಿಕೆಯಲ್ಲಿ ವಿಶೇಷ ಲೇಖನ ಪ್ರಕಟಿಸಿತ್ತು. ಈ ಲೇಖನ ಉಲ್ಲೇಖಿಸಿ ವಿಧಾನಪರಿಷತ್ತಿನಲ್ಲಿ ಜೆಡಿಎಸ್ನ ಬಸವರಾಜ ಹೊರಟ್ಟಿ ಮತ್ತು ಬಿಜೆಪಿಯ ಅರುಣ್ ಶಹಾಪೂರ, ಪ್ರಾಧ್ಯಾಪಕರ ನಿಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ತನಿಖೆಯಾಗಬೇಕು. ನಿಯೋಜನೆ ತಕ್ಷಣ ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದರು.
ಹೀಗಾಗಿ, ಅಸಮತೋಲನ ಹೊಂದಾಣಿಕೆ ಮಾಡಿ ವೈಜ್ಞಾನಿಕವಾಗಿ ಮಾನವ ಸಂಪನ್ಮೂಲ ಬಳಕೆ ಮಾಡಿಕೊಳ್ಳುವ ಸಲುವಾಗಿ ಪ್ರಾಧ್ಯಾಪಕರನ್ನು ಅಗತ್ಯ ಕಾರ್ಯಭಾರವಿರುವ ಕಾಲೇಜುಗಳಿಗೆ ನಿಯೋಜನೆ ಮಾಡಿ ಗುರುವಾರ ಆದೇಶ ಹೊರಡಿಸಿದೆ.