ಜಿಲ್ಲೆ

ರಾಬಕೊವಿ ನಿರ್ದೇಶಕರ ಚುನಾವಣೆಗೆ 52 ಉಮೇದುವಾರಿಕೆ ಸಲ್ಲಿಕೆ

ಬಳ್ಳಾರಿ : ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗೆ ಒಟ್ಟು 52 ನಾಮಪತ್ರ ಸಲ್ಲಿಕೆಯಾಗಿವೆ. ರಾಯಚೂರು-15, ಬಳ್ಳಾರಿ ಹಾಗೂ ವಿಜಯನಗರ ಸೇರಿ -15, ಕೊಪ್ಪಳ-22 ಒಟ್ಟು 52 ನಾಮಪತ್ರ ಸಲ್ಲಿಕೆಯಾಗಿವೆ. ಜು. 2 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಜು. 03 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ ಎಂದು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಚುನಾವಣಾಧಿಕಾರಿ ಪಿ.ಪ್ರಮೋದ್ ತಿಳಿಸಿದ್ದಾರೆ.

---------------