ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಕಳೆದ ೬ ತಿಂಗಳಲ್ಲಿ ೫೦೨೧ ಪ್ರಕರಣಗಳನ್ನು ಇತ್ಯರ್ಥಪಡಿಸಿದೆ ಎಂದು ಆಯೋಗದ ರಾಜ್ಯಾಧ್ಯಕ್ಷ ಡಾ. ಶ್ಯಾಮ್ ಭಟ್ ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ೨೦೨೩ರ ನವೆಂಬರ್ ತಿಂಗಳಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಹೊಸ ಸಮಿತಿ ರಚನೆಯಾಗಿದೆ. ಆಗ ಆಯೋಗದ ಮುಂದೆ ೮,೦೫೪ ಪ್ರಕರಣಗಳು ಇದ್ದವು. ಕಳೆದ ೬ ತಿಂಗಳಲ್ಲಿ ೫೦೨೧ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದ್ದು, ಇನ್ನು ೩,೦೩೩ ಪ್ರಕರಣಗಳು ಬಾಕಿ ಇವೆ. ತ್ವರಿತಗತಿಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸುವ ಉz್ದೆÃಶದಿಂದ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಲಾಗುತ್ತಿದೆ ಎಂದರು.
ಜಿಲ್ಲಾ ಕೇಂದ್ರದಲ್ಲಿ ದೂರುದಾರರು ಹಾಗೂ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆ ನಡೆಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಆಯೋಗ ಕಾರ್ಯಕ್ರಮ ರೂಪಿಸಲಾಗಿದೆ. ಈವರೆಗೆ ೮ ಜಿಲ್ಲೆಗಳಿಗೆ ಭೇಟಿ ನೀಡಲಾಗಿದ್ದು, ಇದೀಗ ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಿz್ದÉÃವೆ ಎಂದು ಹೇಳಿದರು.
ಆಯೋಗಕ್ಕೆ ದೂರು ಸಲ್ಲಿಸಿದವರು ಹಾಗೂ ಇಲಾಖೆಯವರು ಬೆಂಗಳೂರಿಗೆ ಬಂದು ಹೋಗಲು ತೊಂದರೆಯಾಗಲಿದೆ. ಜತೆಗೆ ಆರ್ಥಿಕವಾಗಿ ಹೊರೆಯಾಗಲಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ೫೫ ಪ್ರಕರಣಗಳು ಇತ್ಯರ್ಥವಾಗಬೇಕಾಗಿದ್ದು, ಈ ಪೈಕಿ ೨೮ ಕೇಸ್‌ಗಳಲ್ಲಿ ವರದಿ ಬಂದಿದೆ. ೨೭ ಪ್ರಕರಣಗಳು ಇತ್ಯರ್ಥವಾಗಬೇಕಾಗಿದೆ. ವಿಚಾರಣೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು. ಅಗತ್ಯಬಿದ್ದರೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು.
ಜನರ ಹಕ್ಕಿಗೆ ಯಾವುದೇ ರೀತಿಯಲ್ಲಾದರೂ ತೊಂದರೆಯಾದಲ್ಲಿ ಆಯೋಗ ದೂರನ್ನು ಸ್ವೀಕರಿಸಲಿದೆ. ಕೆಲವು ಪ್ರಕರಣಗಳಲ್ಲಿ ಸೋಮೋಟೋ ಕೇಸ್‌ಗಳನ್ನು ದಾಖಲಿಸಿಕೊಂಡು ಇಲಾಖೆಗಳ ಗಮನ ಸೆಳೆಯಲಾಗಿದೆ. ಆಯೋಗಕ್ಕೆ ಪ್ರತಿದಿನ ೩೦-೪೦ ದೂರುಗಳು ಬರುತ್ತಿವೆ. ಹಾಗಾಗಿ ಸಂಖ್ಯೆ ಹೆಚ್ಚಾಗುತ್ತಿದೆ. ಅದೇ ವೇಗದಲ್ಲಿ ಇತ್ಯರ್ಥಪಡಿಸುವ ಕೆಲಸವು ಸಹ ನಡೆಯುತ್ತಿದೆ ಎಂದರು.
ಚಿಕ್ಕಮಗಳೂರು ಜಿಲ್ಲಾ ಕಾರಾಗೃಹದ ನಿರ್ವಹಣೆ ಉತ್ತಮವಾಗಿದೆ. ಕ್ಲಿನಿಂಗ್ ಮತ್ತು ಗಾರ್ಡನ್ ಚೆನ್ನಾಗಿದೆ. ಅನಕ್ಷರಸ್ಥ ಕೈದಿಗಳಿಗೆ ಅಕ್ಷರಾಭ್ಯಾಸ ಮಾಡಿಸಲು ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಇದೆಲ್ಲಾ ಪ್ರಶಂಸನೀಯವಾದುದು ಎಂದು ಹೇಳಿದರು.
ಇಲ್ಲಿನ ಬಂಧಿಖಾನೆಯಲ್ಲಿ ೧೫೫ ಮಂದಿ ಖೈದಿಗಳು ಇರಲು ಮಾತ್ರ ಅವಕಾಶ. ಆದರೆ, ಇದೀಗ ೧೭೮ ಮಂದಿ ಖೈದಿಗಳು ಇದ್ದಾರೆ. ಇವರುಗಳ ಪೈಕಿ ಸುಮಾರು ಶೇ. ೩೦ ಮಂದಿಗೆ ನ್ಯಾಯಾಲಯದಲ್ಲಿ ಅವರ ಪರವಾಗಿ ವಾದ ಮಾಡಲು ವಕೀಲರೇ ಇಲ್ಲ. ಅಂತಹವರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ವಕೀಲರನ್ನು ಒದಗಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆಯೋಗದ ಕಾರ್ಯದರ್ಶಿ ಸುರೇಶ್ ಒಂಟಿಗೋಡು, ದಿನೇಶ್ ಸಂಪತ್‌ರಾಜ್ ಇದ್ದರು.