ಜಿಲ್ಲೆ

ಕಸ ಎಸೆಯುವವರಿಗೆ 5 ಸಾವಿರ ರೂ. ದಂಡ!

vijayavani

ಬೆಂಗಳೂರು: ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ 5 ಸಾವಿರ ರೂ. ದಂಡ ವಿಧಿಸಲು ಬಿಬಿಎಂಪಿ ಅಧಿಕಾರಿಗಳು ಚಿಂತನೆ ನಡೆಸಿದ್ದು, ಇದನ್ನು ಆದೇಶ ರೂಪದಲ್ಲಿ ಜಾರಿಗೊಳಿಸುವ ಪ್ರಸ್ತಾವವನ್ನು ಕೌನ್ಸಿಲ್ ಮುಂದಿಟ್ಟಿದ್ದಾರೆ.

ಈವರೆಗೆ ಕಸ ಎಸೆಯುವವರಿಗೆ 200 ರೂ.ನಿಂದ 1 ಸಾವಿರ ರೂ.ವರೆಗೆ ದಂಡ ವಿಧಿಸಲಾಗುತ್ತಿತ್ತು. ಪರಿಷ್ಕೃತ ಮೊತ್ತದಂತೆ ಮೊದಲ ಬಾರಿಗೆ 1 ಸಾವಿರ ರೂ., ಪುನರಾವರ್ತನೆಯಾದರೆ 5 ಸಾವಿರ ರೂ. ದಂಡ ವಿಧಿಸಲಾಗುವುದು. ಉದ್ಯಮಗಳ ಕಸ ಮತ್ತು ಕಟ್ಟಡ ತ್ಯಾಜ್ಯಕ್ಕೆ 5 ಸಾವಿರ ರೂ.ನಿಂದ 25 ಸಾವಿರ ರೂ. ವಿಧಿಸಲಾಗುತ್ತಿದ್ದು, 10 ಸಾವಿರ ರೂ. ನಿಂದ 50 ಸಾವಿರ ರೂ.ಗೆ ಹೆಚ್ಚಳ ಮಾಡಲು ಚಿಂತಿಸಲಾಗಿದೆ. ದಂಡ ಆದೇಶ ಜಾರಿಜಛಿ ಪಾಲಿಕೆ ಕೌನ್ಸಿಲ್ ಒಪ್ಪಿಗೆ ಅಗತ್ಯವಿದ್ದು, 29ರ ಸಭೆಯಲ್ಲಿ ಚರ್ಚೆಸುವಂತೆ ಸಲಹೆ ನೀಡಿದ್ದಾರೆ.

ಮಾರ್ಷಲ್​ಗಳ ಕೈಗೆ ಯಂತ್ರ: ಪಾಲಿಕೆಯ 8 ವಲಯದ ಆರೋಗ್ಯಾಧಿಕಾರಿಗಳಿಗೆ 200 ದಂಡ ವಿಧಿಸುವ ಯಂತ್ರಗಳನ್ನು ನಿಡಲಾಗಿದೆ. ಪರವಾನಗಿರಹಿತ ವ್ಯಾಪಾರ, ಪ್ಲಾಸ್ಟಿಕ್ ಬಳಕೆ, ಕಸ ಎಸೆಯುವ ಮತ್ತು ವಿಂಗಡಿಸದ ಉದ್ಯಮ ಸಂಸ್ಥೆಗಳಿಗೆ ಅವರು ದಂಡ ವಿಧಿಸುತ್ತಿದ್ದರು. ಈಗ ಎಚ್​ಡಿಎಫ್​ಸಿ ಬ್ಯಾಂಕ್ 200 ಎಲೆಕ್ಟ್ರಾನಿಕ್ ಯಂತ್ರ ನೀಡಿದ್ದು, ಅವುಗಳನ್ನು ಮಾರ್ಷಲ್​ಗಳಿಗೆ ನೀಡಲಾಗುವುದು. ತಪ್ಪೆಸಗುವವರಿಗೆ ಮಾರ್ಷಲ್​ಗಳು ದಂಡ ವಿಧಿಸಿ ಸ್ಥಳದಲ್ಲೇ ರಸೀದಿ ನೀಡಲಿದ್ದಾರೆ.