ಜಿಲ್ಲೆ

500 ವರ್ಷಗಳ ಹೋರಾಟದ ಫಲ

ಮಾನ್ವಿ: ತಾಲೂಕಿನ ಚಿಕ್ಕಕೊಟ್ನೆಕಲ್, ಈರಲಗಡ್ಡೆ, ನಲಗಮದಿನ್ನಿ, ದೇವಿಪುರ ಹಾಗೂ ಇತರ ಗ್ರಾಮಗಳಲ್ಲಿ ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆಯನು ಸಾರ್ವಜನಿಕರಿಗೆ ಮಂಗಳವಾರ ವಿತರಿಸಲಾಯಿತು.

ಅಡವಿ ಅಮರೇಶ್ವರ ದೇವಸ್ಥಾನದ ಆವರಣದಲ್ಲಿ ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಅಯ್ಯಪ್ಪ ಮ್ಯಾಕಲ್ ಮಾತನಾಡಿ, 500 ವರ್ಷಗಳ ನಿರಂತರ ಹೋರಾಟದ ಫಲವಾಗಿ ಶ್ರೀರಾಮ ಜನ್ಮಸ್ಥಳದಲ್ಲಿ ರಾಮ ಮಂದಿರ ಮರು ನಿರ್ಮಾಣವಾಗುತ್ತಿದೆ. ಈ ಕುರಿತು ಪ್ರತಿಯೊಬ್ಬ ಹಿಂದು ಹೆಮ್ಮೆ ಪಡಬೇಕಾಗಿದೆ ಎಂದರು.