ಚಳ್ಳಕೆರೆ: ನಮ್ಮ ಚಿಕ್ಕಪ್ಪ ಎನ್.ಜಯಣ್ಣ ಕಾಲದಿಂದಲೂ 50 ವರ್ಷದಿಂದ ಮಾದಿಗ ಸಮುದಾಯದ ನಡುವೆ ಸಂಬಂಧದಂತೆ ನಡೆದುಕೊಂಡಿದ್ದೇವೆ ಎಂದು ಜಿಲ್ಲಾ ಸಚಿವ ಡಿ.ಸುಧಾಕರ್ ಹೇಳಿದರು.
ತಾಲೂಕು ಮಾದಿಗ ನೌಕರರ ಸಾಂಸ್ಕೃತಿಕ ಸಂಘ ನಗರದ ಅನಂತನಾಥ ಜೈನಭವನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಬಹುಸಂಖ್ಯಾತ ಜನಾಂಗದ ಸಾಮಾಜಿಕ ಬದಲಾವಣೆಗಾಗಿ ಸರ್ಕಾರ ನೀಡುತ್ತಿರುವ ಶೇ.27ರಷ್ಟು ಅನುದಾನ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಇತರ ಸಮುದಾಯದವರಿಗೆ ಮಾದರಿ ಆಗುವ ರೀತಿ ಶಿಕ್ಷಣದಲ್ಲಿ ಸಾಧಕರಾಗಿ ಬೆಳೆಯಬೇಕು. ನೂರಾರು ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರಕ್ಕೆ ಭಾಜನರಾಗಿರುವುದು ಜನಾಂಗದಲ್ಲಿ ಶಿಕ್ಷಣದ ಮಹತ್ವ ಜಾಗೃತಿ ಆಗಿದೆ ಎಂದು ಹೇಳಿದರು.