ಜಿಲ್ಲೆ

ಮೀನುಗಾರಿಕೆಗೆ ಶೇ.50 ರಷ್ಟು ಸಹಾಯಧನ

ಗಿರೀಶ ಸಗರ

ಬಾಗಲಕೋಟೆ: ಮೀನುಗಾರಿಕೆ ಇಲಾಖೆಯು ಪ್ರಸಕ್ತ ಸಾಲಿನ ಒಳನಾಡು ಮೀನುಗಾರಿಕೆ ಅಭಿವೃದ್ಧಿಗಾಗಿ ಸಹಾಯ ಯೋಜನೆಯಡಿ ವೃತ್ತಿಪರ ಮೀನುಗಾರರು, ಮೀನುಗಾರರ ಸಹಕಾರ ಸಂಘಗಳ ಮುಖಾಂತರ ಮೀನು ಸಲಕರಣೆ ಖರೀದಿಗೆ ಶೇ.50 ರಷ್ಟು ಸಹಾಯಧನ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಿದೆ.

ಸಹಾಯಧನ ಗರಿಷ್ಠ 5 ಸಾವಿರ ರೂ. ಹಾಗೂ ವಿಶೇಷ ಘಟಕ, ಗಿರಿಜನ ಉಪಯೋಜನೆಯಡಿ ಮೀನು ಸಲಕರಣೆ ಕಿಟ್ಟು ಸರಬರಾಜು ಹಾಗೂ ಜಲಾಶಯ ಮತ್ತು ಕೆರೆಗಳಲ್ಲಿ ಹಿಡುವಳಿ ಮಾಡಲಾದ ಮೀನು ಮಾರಾಟಕ್ಕಾಗಿ, ಮೀನು ಮಾರುಕಟ್ಟೆ ಹಾಗೂ ಮತ್ಸೃವಾಹಿನಿಗೆ ಸಹಾಯಧನ ಯೋಜನೆಯಡಿ ದ್ವಿ-ಚಕ್ರ ವಾಹನ ಖರೀದಿಗಾಗಿ ಶೇ.40 ರಷ್ಟು ಗರಿಷ್ಠ ಸಹಾಯಧನ 30 ಸಾವಿರ ರೂ, ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಸೆ.16 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಬಾದಾಮಿ, ಬಾಗಲಕೋಟೆ, ಹುನಗುಂದ, ಗುಳೇದಗುಡ್ಡ, ಇಳಕಲ್ಲ ತಾಲೂಕಿನವರು ಮೀನುಗಾರಿಕೆ ಸಹಾಯಕ ನಿರ್ದೇಶಕರು ಬಾದಾಮಿ ಮತ್ತು ಜಮಖಂಡಿ, ಮುಧೋಳ, ಬೀಳಗಿ, ರಬಕವಿ-ಬನಹಟ್ಟಿ ತಾಲೂಕಿನ ಮೀನುಗಾರರು ಮೀನುಗಾರಿಕೆ ಸಹಾಯಕ ನಿರ್ದೇಶಕರು, ಜಮಖಂಡಿ ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.