ನಿಪ್ಪಾಣಿ: ಪ್ರವಾಹ ಬಂದಾಗ ಹೊಲಗದ್ದೆಗಳಿಗೆ, ಮನೆಗಳಿಗೆ ನೀರು ನುಗ್ಗಿದಂತೆ ತಡೆಯುವ ಉದ್ದೇಶದಿಂದ ತಾಲೂಕಿನ ಮಾಂಗೂರ ತಿರುವಿನ ಬಳಿ ವೇದಗಂಗಾ ನದಿಯಿಂದ 300 ಅಡಿ ಅಂತರದಲ್ಲಿ 50 ಕೋಟಿ ರೂ. ಅನುದಾನದಲ್ಲಿ ಸೇತುವೆ ನಿರ್ಮಾಣವಾಗಲಿದೆ ಎಂದು ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲಗೊಂಡಾ ಪಾಟೀಲ ಹೇಳಿದರು.
ಸಮೀಪದ ಮಾಂಗೂರ ಬಳಿ ನಿರ್ಮಾಣವಾಗಲಿರುವ ಸೇತುವೆ ಸ್ಥಳವನ್ನು ಬುಧವಾರ ಪರಿಶೀಲಿಸಿ ಮಾತನಾಡಿ, ಪ್ರವಾಹ ಬಂದಾಗ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆ ಮನಗಂಡು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಶಾಸಕಿ ಶಶಿಕಲಾ ಜೊಲ್ಲೆ ಆವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿಕೊಂಡಿದ್ದರು. ಅದರಂತೆ ಈಗ ಸೇತುವೆ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾದ ಅಜಿತ ಬೋಗಾರ, ಸಂಜಯ ಪಾಲಕೆ, ನಿತೇಶ ಯಾದವ, ಜಗದೀಶ್ವರ, ಹಾಲಸಿದ್ಧನಾಥ ಕಾರ್ಖಾನೆ ಸಂಚಾಲಕ ಅವಿನಾಶ ಪಾಟೀಲ, ಪ್ರಕಾಶ ಶಿಂಧೆ, ಸಮಿತ ಆಸನೆ, ವಿನಯ ಪಾಟೀಲ, ಸುಹಾಸ ಗೂಗೆ, ರಾವಸಾಹೇಬ ರಾಳೆ, ಶ್ರೀಕಾಂತ ಬನ್ನೆ, ಪಿಎಸ್‌ಲ್‌ಡಿ ಬ್ಯಾಂಕ್ ಅಧ್ಯಕ್ಷ ಎಸ್.ಎಸ್.ಢವಣೆ, ಆನಂದ ಯಾದವ, ಸಿದ್ಧು ನರಾಟೆ, ಗುತ್ತಿಗೆದಾರ ಎಸ್.ಎಂ. ಔತಾಡೆ, ವಿಜಯ ದಾಯಿಂಗಡೆ ಇತರರಿದ್ದರು.