ವಿಜಯಪುರ : ನಗರದ ಪ್ರತಿಷ್ಠಿತ ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ವೈದ್ಯಕಿಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರಕ್ಕೆ 2025&26ನೇ ಶೈಣಿಕ ವರ್ಷದಲ್ಲಿ ಎಂಬಿಬಿಎಸ್ ಕೋರ್ಸಿಗೆ 50 ಹೆಚ್ಚುವರಿ ಸೀಟುಗಳು ಮಂಜೂರಾಗಿವೆ. ಅದರಿಂದಾಗಿ ಬಿಎಲ್ಡಿಇ ವೈದ್ಯಕಿಯ ಕಾಲೇಜಿನಲ್ಲಿ ಈ ಬಾರಿ ಒಟ್ಟು 250 ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಪ್ರಥಮ ವರ್ಷಕ್ಕೆ ಪ್ರವೇಶ ಸಿಗಲಿದೆ.
ಕಾಲೇಜು ಈ ವರ್ಷದ ಜನೇವರಿಯಲ್ಲಿ ಹೆಚ್ಚುವರಿ ಸೀಟು ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿತ್ತು. ಅದರಂತೆ 2025 ಜೂನ್ ತಿಂಗಳಿನಲ್ಲಿ ನ್ಯಾಷನಲ್ ಮೆಡಿಕಲ್ ಕಮಿಷನ್ ಅಧಿಕಾರಿಗಳು ಕಾಲೇಜು ಮತ್ತು ಆಸ್ಪತ್ರೆಗೆ ಆಗಮಿಸುವ ಜತೆಗೆ ಇಲ್ಲಿ ಲಭ್ಯವಿರುವ ಮೂಲ ಸೌಕರ್ಯ, ವೈದ್ಯಕಿಯ ಸಲಕರಣೆ, ಅರ್ಹ ತವೈದ್ಯರು, ನರ್ಸಿಂಗ್ ಸಿಬ್ಬಂದಿ, ರೋಗಿಗಳ ದಾಖಲಾತಿ ಸೇರಿದಂತೆ ಇನ್ನಿತರ ಸೌಲಭ್ಯಗಳ ಕುರಿತು ಮೌಲ್ಯಮಾಪನ ನಡೆಸಿ ವರದಿ ಸಲ್ಲಿಸಿದ್ದರು.
ವರದಿ ಪರಿಗಣಿಸಿ ದೆಹಲಿಯ ನ್ಯಾಷನಲ್ ಮೆಡಿಕಲ್ ಕಮಿಷನ್ ಹೆಚ್ಚುವರಿಯಾಗಿ 50 ಎಂಬಿಬಿಎಸ್ ಸೀಟುಗಳನ್ನು ಮಂಜೂರು ಮಾಡಿದೆ. ಅದರಿಂದಾಗಿ ಬಿಎಲ್ಡಿಇ ಡೀಮ್ಡ್ ವಿವಿಯ ಬಿ.ಎಂ. ಪಾಟೀಲ ಮೆಡಿಕಲ್ ಕಾಲೇಜು ಹೆಚ್ಚುವರಿ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಶೈಣಿಕ ಮತ್ತು ಪ್ರಾಯೋಗಿಕ ತರಬೇತಿ ಮತ್ತು ಹೊಸದಾಗಿ ವೈದ್ಯರನ್ನಾಗಿ ತಯಾರು ಮಾಡಿ ಉತ್ತರ ಕರ್ನಾಟಕದ ರೋಗಿಗಳಿಗೆ ಹೆಚ್ಚಿನ ಆರೋಗ್ಯ ಸೇವೆ ಒದಗಿಸಲು ಅನುಕೂಲವಾಗಿದೆ. ಅಲ್ಲದೆ, ಈಗಾಗಲೇ ಎಂಡಿ, ಎಂಎಸ್., ಎಂಸಿಎಚ್, ಡಿಎಂ ಸೇರಿದಂತೆ 24ಕ್ಕೂ ಹೆಚ್ಚು ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ 400ಕ್ಕೂ ಅಧಿಕ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ.
ನ್ಯಾಷನಲ್ ಮೆಡಿಕಲ್ ಕಮಿಷನ್ ಹೊಸದಾಗಿ 50 ಸೀಟುಗಳನ್ನು ಮಂಜೂರು ಮಾಡಿರುವುದಕ್ಕೆ ಸಂಸ್ಥೆಯ ಅಧ್ಯ ಎಂ.ಬಿ. ಪಾಟೀಲ, ಕುಲಾಧಿಪತಿ ಬಸನಗೌಡ ಪಾಟೀಲ, ಸಮಕುಲಾಧಿಪತಿ ಡಾ. ವೈ.ಎಂ. ಜಯರಾಜ, ಹಂಗಾಮಿ ಕುಲಪತಿ ಡಾ. ಅರುಣ ಇನಾಮದಾರ, ಸಂತಸ ವ್ಯಕ್ತಪಡಿಸಿದ್ದು, ಈ ಸೀಟುಗಳು ಮಂಜೂರಾಗಲು ಶ್ರಮಿಸಿದ ಕಾಲೇಜಿನ ಕಾಲೇಜಿನ ನಿಕಟಪೂರ್ವ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ವೈದ್ಯಕಿಯ ಅಧೀಕ ಡಾ. ರಾಜೇಶ ಹೊನ್ನುಟಗಿ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಡೀಮ್ಡ್ ವಿವಿ ರಿಜಿಸ್ಟ್ರಾರ್ ಡಾ. ಆರ್.ವಿ. ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯ