ಜೈನಾಪುರ ಗ್ರಾಮದಲ್ಲಿ ಅರಿಹಂತ ಶುಗರ್ಸ್‌ನಲ್ಲಿ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಗಣ್ಯರು ಚಾಲನೆ ನೀಡಿದರು. ರಾವಸಾಹೇಬ ಪಾಟೀಲ, ಅಭಿನಂದನ ಪಾಟೀಲ, ಉತ್ತಮ ಪಾಟೀಲ, ವಿನಯಶ್ರೀ ಪಾಟೀಲ, ಸಚಿನ ಬಿಂದಗೆ ಇತರರು ಇದ್ದರು. 
ಜಿಲ್ಲೆ

5 ಲಕ್ಷ ಮೆ. ಟ್ರನ್ ಕಬ್ಬು ನುರಿಸುವ ಗುರಿ

ಬೋರಗಾಂವ, ಬೆಳಗಾವಿ
ಸಹಕಾರಿ ಧುರೀಣ ರಾವಸಾಹೇಬ ಪಾಟೀಲ ಮಾರ್ಗದರ್ಶನದಲ್ಲಿ ಸಕ್ಕರೆ ಕ್ಷೇತ್ರಕ್ಕೆ ಮಾದರಿಯಾಗಿರುವ ಜೈನಾಪುರ ಅರಿಹಂತ ಶುಗರ್ಸ್‌ ಪ್ರಸಕ್ತ ಸಾಲಿನ ಹಂಗಾಮಿಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಪ್ರಸಕ್ತ ಹಂಗಾಮಿನಲ್ಲಿ 5 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ ಎಂದು ಕಾರ್ಖಾನೆ ಅಧ್ಯಕ್ಷ ಉತ್ತಮ ಪಾಟೀಲ ಹೇಳಿದರು.

ಸಮೀಪದ ಜೈನಾಪುರ ಗ್ರಾಮದಲ್ಲಿ ಅರಿಹಂತ ಶುಗರ್ಸ್‌ನ 5ನೇ ಕಬ್ಬು ನುರಿಸುವ ಹಂಗಾಮಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ವರ್ಷ ಕಾರ್ಖಾನೆಯಲ್ಲಿ ನೂತನ ತಂತ್ರಜ್ಞಾನ ಅಳವಡಿಸಿ ರೈತರಿಗೆ ಅನುಕೂಲ ಮಾಡಿ ಕೊಡಲಾಗುತ್ತಿದೆ ಎಂದು ತಿಳಿಸಿದರು. ಕಾರ್ಖಾನೆಯಿಂದ ರೈತರಿಗೆ ಸಕಾಲಕ್ಕೆ ಕಬ್ಬಿನ ಸಸಿ, ರಸಗೊಬ್ಬರ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಶೀಘ್ರವೇ ಡಿಸ್ಟಿಲರಿ ಪ್ರಕ್ರಿಯೆ ಪ್ರಾರಂಭಗೊಳ್ಳಲಿದ್ದು, ಹಂಗಾಮು ಯಶಸ್ಸಿಗೆ ಎಲ್ಲರೂ ಸಹಕಾರ ನೀಡಬೇಕು ಎಂದರು. ಕಾರ್ಖಾನೆ ಎಂ.ಡಿ ಅಭಿನಂದನ ಪಾಟೀಲ ಮಾತನಾಡಿ, ಕಾರ್ಖಾನೆಯಿಂದ ಎ್ಆರ್‌ಪಿಗಿಂತ ಹೆಚ್ಚಿನ ದರ ರೈತರಿಗೆ ನೀಡಲಾಗುತ್ತಿದೆ. ಈ ವರ್ಷವು ರೈತರಿಗೆ ಹೆಚ್ಚಿನ ದರ ನೀಡಲಾಗುತ್ತದೆ. ಕಬ್ಬು ಕಟಾವು ಯಂತ್ರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ರೈತರಿಗೆ ನೀಡುವ ಮೂಲಕ ಕಬ್ಬು ಕಟಾವಿಗೆ ಅನುಕೂಲ ಮಾಡಲಾಗುತ್ತದೆ ಎಂದರು.

ಸಹಕಾರಿ ಧುರೀಣ ರಾವಸಾಹೇಬ ಪಾಟೀಲ, ಮೀನಾಕ್ಷಿ ಪಾಟೀಲ, ವಿನಯಶ್ರೀ ಪಾಟೀಲ, ಜಿಪಂ ಮಾಜಿ ಸದಸ್ಯೆ ಸ್ನೇಹಲತಾ ಪಾಟೀಲ, ಸುರೇಖಾ ನಾಯಿಕ, ಇಂದ್ರಜಿತ ಪಾಟೀಲ, ಶ್ಯಾಮ ರೇವಡೆ, ಸಂಜಯ ನಿಲಜಗಿ, ರಾಜೀವ ಚೌಗುಲಾ, ರಾಕೇಶ ಚಿಂಚಣೆ, ಕೇದಾರ ಕುಲಕರ್ಣಿ, ಸಚಿನ ಬಿಂದಗೆ, ಕಾರ್ಖಾನೆ ಸಿಇಒ ಆರ್.ಕೆ.ಶೆಟ್ಟಿ, ಮಹಾವೀರ ಕತ್ರಾಳೆ, ಅಮೋಲ ನಾಯಿಕ, ವರ್ಧಮಾನ ಪಾಟೀಲ, ಸುಭಾಷ ಚೌಗಲಾ, ಸನತಕುಮಾರ ಗಣಿ ಇತರರಿದ್ದರು.