ಗೋಣಿಕೊಪ್ಪ: ಕುತ್‌ನಾಡು ಬೆರಳಿನಾಡು ಪ್ರೌಢಶಾಲೆಯ ವಜ್ರಮಹೋತ್ಸವದ ಪ್ರಯುಕ್ತ ನೆಡೆಯುತ್ತಿರುವ ಮೂರನೇಯ ದಿನದ ಹಾಕಿ ಪ್ರಥಮ ಪಂದ್ಯದಲ್ಲಿ ಮಾಹದೇವರ ಸ್ಪೋರ್ಟ್ಸ್ ಕ್ಲಬ್ ತಂಡವು ಶಿವಾಜಿ ನಾಪೋಕ್ಲ್ ತಂಡವನ್ನು 2-0 ಗೋಲುಗಳ ಅಂತರದಲ್ಲಿ ಸೋಲಿಸುವ ಮೂಲಕ ವಿಜಯ ಸಾಧಿಸಿತು.
ದ್ವಿತೀಯ ಪಂದ್ಯದಲ್ಲಿ ಬೂಟ್ಟಿಯತ್ ನಾಡು ಕುಂದ ತಂಡ ಎಂಆರ್‌ಎಫ್ ಮೂರ್ನಾಡು ತಂಡವನ್ನು 3-2 ಗೋಲುಗಳ ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.
ಮೂರನೆ ಪಂದ್ಯದಲ್ಲಿ ಕೊಣನಕಟ್ಟೆ ತಂಡವು ಕುತ್ತ್ ನಾಡು ಸ್ಟ್ರೈಕರ್ಸ್ ತಂಡವನ್ನು 4-2 ಗೋಲುಗಳ ಅಂತರದಿಂದ ಸೋಲಿಸಿ ಕ್ವಾಟರ್ ಫೈನಲ್ ಪ್ರವೇಶಿಸಿತು.
ದಿನದ ನಾಲ್ಕನೇ ಪಂದ್ಯದಲ್ಲಿ ಡ್ರಿಬ್ಲರ್ಸ್ ಹಂಪ್ ತಂಡ ಇವೈಸಿ ಬೇಗೂರು ತಂಡವನ್ನು 2-0 ಗೋಲುಗಳ ಅಂತರದಿಂದ ಸೋಲಿಸಿತು.
ದಿನದ ಕೊನೆಯ ಪಂದ್ಯದಲ್ಲಿ ಬ್ಲೆಜ್ ಮೂರ್ನಾಡು ತಂಡವು ಎಎಸ್‌ಸಿ ಅಮ್ಮತಿ ತಂಡವನ್ನು 2-0 ಗೋಲುಗಳಿಂದ ಸೋಲಿಸಿತು.
ಪಂದ್ಯದ ನಿರ್ದೇಶಕರಾಗಿ ಸಣ್ಣುವಂಡ ಲೋಕೇಶ್ ನಂಜಪ್ಪ ಇದ್ದರು. ತೀರ್ಪುಗಾರರಾಗಿ ಕುಪ್ಪಂಡ ದಿಲನ್, ಮೂಕಚಂಡ ನಾಚ್ಚಪ್ಪ, ಚೊಯಮಾಡಂಡ ಚಂಗಪ್ಪ, ಅಪ್ಪಚೆಟೋಳಂಡ ಅಯ್ಯಪ್ಪ, ಕಲ್ಮಾಡಂಡ ಸೋಮಣ್ಣ, ವಿನೋದ್ ಕುಮಾರ್, ಕರವಂಡ ಅಪ್ಪಣ್ಣ, ಅನ್ನಾಡಿಯಂಡ ಪೊನ್ನಣ್ಣ, ಪಟ್ರಪಂಡ ಸಚಿನ್ ಕಾರ್ಯ ನಿರ್ವಹಿಸಿದರು.