ಜಿಲ್ಲೆ

ಮುಂದಿನ ಸುತ್ತಿಗೆ 5 ತಂಡಗಳು

ಪ್ರಸಿನ್ ಕೆ.ಆರ್

ಗೋಣಿಕೊಪ್ಪ: ಕುತ್‌ನಾಡು ಬೆರಳಿನಾಡು ಪ್ರೌಢಶಾಲೆಯ ವಜ್ರ ಮಹೋತ್ಸವದ ಪ್ರಯುಕ್ತ ನಡೆಯುತ್ತಿರುವ ಹಾಕಿ ಪಂದ್ಯ ಎರಡನೇ ದಿನದ ಪ್ರಥಮ ಪಂದ್ಯದಲ್ಲಿ ಕೆಎಸ್‌ಆರ್‌ಸಿ ವಿರಾಜಪೇಟೆ ತಂಡವು ವನ ಭದ್ರಕಾಳಿ ಹಾತೂರು ತಂಡವನ್ನು ಶೂಟ್ ಔಟ್ ಮೂಲಕ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು.

ದ್ವಿತೀಯ ಪಂದ್ಯದಲ್ಲಿ ಎಂಆರ್‌ಎಫ್ ಮೂರ್ನಾಡು ತಂಡವು ಚಾರ್ಮರ್ಸ್ ತಂಡವನ್ನು 4-1ಗೋಲುಗಳಿಂದ ಸೋಲಿಸಿತು.

ಮೂರನೇ ಪಂದ್ಯದಲ್ಲಿ ಕುತ್ತ್ ನಾಡ್ ತಂಡವು ಫಾಲ್ಕನ್ ತಂಡದ ವಿರುದ್ಧ 2-0 ಗೋಲುಗಳ ಅಂತರದಿಂದ ಗೆಲುವು ದಾಖಲಿಸಿತು.

ನಾಲ್ಕನೇ ಪಂದ್ಯದಲ್ಲಿ ಮಲ್ಮಸ್ಪೋರ್ಟ್ಸ್ ಕ್ಲಬ್ ತಂಡವು ಬೊಳಿಯೂರು ತಂಡವನ್ನು 3-2ಗೋಲುಗಳ ಅಂತರದಿಂದ ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿತು.

ದಿನದ ಕೊನೆಯ ಪಂದ್ಯದಲ್ಲಿ ಕಿರುಗೂರು ತಂಡ ಬೆರಳಿನಾಡು ತಂಡವನ್ನು 2-1ಗೋಲುಗಳಿಂದ ಸೋಲಿಸಿತು.

ತೀರ್ಪುಗಾರರಾಗಿ ಚೈಯಂಡ ಅಪ್ಪಚ್ಚು, ಕರವಂಡ ಅಪ್ಪಣ, ಕುಪ್ಪಂಡ ದಿಲನ್, ರಾಯಲ್ ಐಯ್ಯಣ್ಣ, ಸಚಿನ್ ಮಂದಣ್ಣ, ವಿನೋದ್ ಕುಮಾರ್, ಅಪ್ಪಚೆಟೋಳಂಡ ಅಯ್ಯಪ್ಪ, ಕಲ್ಮಾಡಂಡ ಸೋಮಣ್ಣ, ಚೊಯಮಾಡಂಡ ಚಂಗಪ್ಪ, ಅನ್ನಾಡಿಯಂಡ ಪೊನ್ನಣ್ಣ, ಮೂಕಚಂಡ ನಾಚ್ಚಪ್ಪ ಕಾರ್ಯ ನಿರ್ವಹಿಸಿದರು. ವೀಕ್ಷಕ ವಿವರಣೆಯನ್ನು ಮಾಲೆಟಿರ ಶ್ರೀನಿವಾಸ್ ನೀಡಿದರು. ಪಂದ್ಯವಳಿಯ ನಿರ್ದೇಶಕ ಸಣ್ಣುವಂಡ ಲೋಕೇಶ್ ನಂಜಪ್ಪ ಇದ್ದರು.