ಗುಳೇದಗುಡ್ಡ: ಇಂಜಿನವಾರಿ ಹಾಗೂ ಆಸಂಗಿ ಗ್ರಾಮಗಳಲ್ಲಿ ನಡೆದ ಎರಡು ಕಳ್ಳತನ ಪ್ರಕರಣ ಭೇದಿಸಿರುವ ಪೊಲೀಸರು, ಕೃಷಿ ಪಂಪ್‌ಸೆಟ್ ಹಾಗೂ ಹಂಡೆ ಗಳನ್ನು ವಶಪಡಿಸಿಕೊಂಡಿದ್ದಾರೆ.
ಜಮೀನುಗಳಲ್ಲಿಯ ಪಂಪ್‌ಸೆಟ್ ಕದ್ದ ಹುನಗುಂದದ ಸತೀಶ ಮಣಿ ಮಾದರನನ್ನು ಬಂಧಿಸಿ ಆತನಿಂದ 5 ಪಂಪ್‌ಸೆಟ್ ಹಾಗೂ ಬೊಲೆರೋ ವಾಹನ ವಶಕ್ಕೆ ಪಡೆದಿದ್ದಾರೆ. ತಾನು ಮತ್ತು ಇನ್ನೂ 4 ಜನರು ಕೂಡಿಕೊಂಡು ಆಸಂಗಿ ಮತ್ತು ಇಂಜಿನವಾರಿ ಗ್ರಾಮ ವ್ಯಾಪ್ತಿಯ ಮಲಪ್ರಭಾ ನದಿ ದಂಡೆಯ ಮೇಲಿನ 8 ಕೃಷಿ ಪಂಪ್‌ಸೆಟ್‌ಗಳನ್ನು ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಸಂಗಿ, ಲಾಯದಗುಂದಿ, ಸಬ್ಬಲಹುಣಸಿ ಗ್ರಾಮದ ಮನೆಗಳ ಮುಂದೆ ಇಟ್ಟಿದ್ದ ತಾಮ್ರದ ಹಂಡೆಗಳನ್ನು ಕದ್ದ ಕಳ್ಳನನ್ನು ಪೊಲೀಸರು ಬಂಧಿಸಿ ಆತನಿಂದ 30 ಸಾವಿರ ರೂ. ಮೌಲ್ಯದ 8 ಹಂಡೆಗಳನ್ನು ವಶಕ್ಕೆ ಪಡೆದಿದ್ದಾರೆ. ಬಳ್ಳಾರಿ ಜಿಲ್ಲೆಯ ಕರಗೋಡಿನ ಮಂಜುನಾಥ ಮರಿಸ್ವಾಮಿ ಹಂಡಿಜೋಗಿ ಬಂಧಿತ ಆರೋಪಿ.
ಎರಡು ಪ್ರಕರಣಗಳ ಪೊಲೀಸ್ ತನಿಖಾ ಕಾರ್ಯಾಚರಣೆಯಲ್ಲಿ ಗುಳೇದಗುಡ್ಡ ಪಿಎಸ್‌ಐ ಸಿದ್ದಪ್ಪ ಯಡಹಳ್ಳಿ, ಎಎಸ್‌ಐ ಬಿಳಿಕುದರಿ, ಶರಣು ಕೂಡ್ಲೆಪ್ಪನವರ, ವಿ.ಹೆಚ್, ತುಂಬದ, ಬಿ.ಎಂ. ಮೊಘಲನ್ನವರ ಗುರು ಮನ್ನಿಕಟ್ಟಿ, ಅಶೋಕ ಕೋಟಿ, ಸಂತೋಷ ಮೇಟಿ, ಎಂ.ಎಸ್.ಭಾವಿಕಟ್ಟಿ, ರಜಪೂತ ಭಾಗವಹಿಸಿದ್ದರು.