ಹೂವಿನಹಡಗಲಿ: ತಾಲೂಕಿನಲ್ಲಿರುವ ಅಂಗವಿಕಲ ಅಭಿವೃದ್ಧಿಗೆ ಶಾಸಕರ ಅನುದಾನದಲ್ಲಿ 30 ಲಕ್ಷ ರೂ. ಮೀಸಲಿಡಲಾಗಿದೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.
ಪಟ್ಟಣದ ಸಿಡಿಪಿಒ ಕಚೇರಿಯ ಆವರಣದಲ್ಲಿ ಬುಧವಾರ ಸುಮಾರು 37 ಜನ ಅಂಗವಿಕರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿ ಮಾತನಾಡಿದರು. 2016ರಿಂದ ತಾಲೂಕಿನ ಅಂಗವಿಕಲರೊಂದಿಗೆ ಸಂಪರ್ಕದಲ್ಲಿದ್ದು ಅವರ ನೋವು ಮತ್ತು ಸಂಕಟಗಳು ನನಗೆ ತಿಳಿದಿದೆ. ನಾವು ಯಾವುದರಲ್ಲೂ ಕಡಿಮೆ ಇಲ್ಲ ಎಂಬಂತೆ ಜೀವನ ನಡೆಸುತ್ತಿದ್ದಾರೆ. ಅವರಿಗೆ ತ್ರಿಚಕ್ರ ವಾಹನದ ಜತೆಗೆ ಸಹಾಯಕವಾಗುವ ಸಲಕರಣೆ ವಿತರಿಸಲಾಗಿದೆ. ಗ್ರಾಪಂಗಳಲ್ಲಿ ಅಂಗವಿಕಲರಿಗಾಗಿ ಮೀಸಲಿರಿಸುವ ಶೇ.5 ಹಣವನ್ನು ಸಮರ್ಪಕವಾಗಿ ಬಳಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವೆ.
ಅಂಗವಿಕಲರಿಗೆ ಅವಶ್ಯವಿರುವ ಸಲಕರಣೆ ಮುಂದಿನ ದಿನಗಳಲ್ಲಿ ನೀಡಲಾಗುವುದು. ಮುಂದಿನ ಅಧಿವೇಶನದಲ್ಲಿ ಅಂಗವಿಕಲರ ಸಮಸ್ಯೆಗಳಿಗೆ ಸ್ಪಂದಿಸಲು ಸಿಎಂಗೆ ಒತ್ತಾಯಿಸಲಾಗುವುದು ಎಂದರು. ಸಿಡಿಪಿಒ ರಾಮನಗೌಡ, ತಾಪಂ ಇಒ ಉಮೇಶ್ ಮೈನಹಳ್ಳಿ, ಎಂಆರ್‌ಡಬ್ಲುೃ ಮಂಜುನಾಥ, ಅಂಗವಿಕಲರ ಮತ್ತು ಪಾಲಕರ ಒಕ್ಕೂಟದ ಅಧ್ಯಕ್ಷ ಚಂದ್ರಪ್ಪ, ವಿಆರ್‌ಡಬ್ಲುೃ ಶಿವರಾಜ, ಜಯಪ್ಪ, ಕೃಷ್ಣನಾಯ್ಕ, ನಿಂಗಪ್ಪ, ಯುಆರ್‌ಡಬ್ಲುೃ ಮಂಗಳಾ ಇತರರಿದ್ದರು.