RemasterDirector_1a5c03258
- ಪಿರಿಯಾಪಟ್ಟಣ : ಮಳೆಗಾಲದಲ್ಲಿ ಶಿಥಿಲಗೊಂಡಿರುವ ಗೋಡೆಗಳ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸುವಂತೆ ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ಮನವಿ ಮಾಡಿದರು.
ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ಗೋಡೆ ಕುಸಿತದಿಂದಾಗಿ ಮೃತಪಟ್ಟ ಮಹಿಳೆ ಹೇಮಲತಾ ಅವರ ಮನೆಗೆ ಶನಿವಾರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸರ್ಕಾರದ 5 ಲಕ್ಷ ರೂ. ಪರಿಹಾರ ಧನದ ಆದೇಶ ಪತ್ರವನ್ನು ವಿತರಿಸಿ ಮಾತನಾಡಿದರು.
ತಾಲೂಕಿನಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಹಲವು ಗ್ರಾಮಗಳಲ್ಲಿ ಅನಾಹುತಗಳು ಸಂಭವಿಸುತ್ತಿರುವ ಬಗ್ಗೆ ವರದಿಯಾಗುತ್ತಿದ್ದು, ಮನೆಗಳ ಗೋಡೆಗಳು ಶಿಥಿಲಗೊಂಡಿದ್ದಲ್ಲಿ ಕೂಡಲೇ ದುರಸ್ತಿ ಪಡಿಸುವುದು ಅಥವಾ ಪರ್ಯಾಯ ವ್ಯವಸ್ಥೆಯತ್ತ ಗಮನ ಹರಿಸುವಂತೆ ತಿಳಿಸಿದರು.
ತಂಬಾಕು ಹದ ಮಾಡುವ ಬ್ಯಾರನ್‌ಗಳ ಗೋಡೆಗಳು, ದನದ ಕೊಟ್ಟಿಗೆಗಳು, ಬರಿ ಮಣ್ಣಿನಿಂದ ನಿರ್ಮಿಸಿರುವ ಗೋಡೆಗಳು ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹೆಚ್ಚು ಶಿಥಿಲಗೊಳ್ಳುತ್ತಿದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸುವುದು ಅಗತ್ಯ ಎಂದರು.
ಕಗ್ಗುಂಡಿ ಗ್ರಾಮದಲ್ಲಿ ಗೋಡೆ ಕುಸಿತದಿಂದಾಗಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಸರ್ಕಾರದ ವತಿಯಿಂದ 5 ಲಕ್ಷ ರೂ. ಪರಿಹಾರ ಧನದ ಆದೇಶ ಪತ್ರ ಈಗಾಗಲೇ ನೀಡಿದ್ದು, ಮನೆಯ ಗೋಡೆ ಬಿದ್ದು ಹೋಗಿರುವುದಕ್ಕೆ ತಕ್ಷಣ ಸಂಬಂಧಪಟ್ಟ ಇಲಾಖೆಯ ಇಂಜಿನಿಯರ್‌ಗಳಿಂದ ಅಂದಾಜು ವೆಚ್ಚ ತರಿಸಿಕೊಂಡು ಮನೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತಹಸೀಲ್ದಾರ್ ಕುಂಞ ಅಹಮದ್, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಕೆಪಿಸಿಸಿ ಸದಸ್ಯ ಅನಿಲ್ ಕುಮಾರ್, ರಾಮಚಂದ್ರೇಗೌಡ, ತಾ.ಪಂ. ಇಒ ಸುನಿಲ್ ಕುಮಾರ್ ಮತ್ತಿತರರು ಹಾಜರಿದ್ದರು.
20.ಥಿಠಿ. 01: ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ಗೋಡೆ ಕುಸಿತದಿಂದಾಗಿ ಮೃತಪಟ್ಟ ಮಹಿಳೆ ಹೇಮಲತಾ ರ ಮನೆಗೆ ಶನಿವಾರ ಸಚಿವ ಕೆ.ವೆಂಕಟೇಶ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಕೆಪಿಸಿಸಿ ಸದಸ್ಯ ಅನಿಲ್ ಕುಮಾರ್, ರಾಮಚಂದ್ರೇಗೌಡ, ತಹಶೀಲ್ದಾರ್ ಕುಂಞ ಅಹಮದ್, ತಾ.ಪಂ.ಇ ಒ ಸುನಿಲ್ ಕುಮಾರ್
ಮಾಜಿ ಶಾಸಕ ಕೆ.ಮಹದೇವ್ ಸಾಂತ್ವನ : ಪಿರಿಯಾಪಟ್ಟಣ: ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ಅತಿಯಾದ ಮಳೆಯಿಂದ ಮನೆಯ ಗೋಡೆ ಕುಸಿದು ಮೃತಪಟ್ಟಿದ್ದ ಮಹಿಳೆ ಹೇಮಲತಾ ಅವರ ಕುಟುಂಬಸ್ಥರನ್ನು ಮಾಜಿ ಶಾಸಕ ಕೆ.ಮಹದೇವ್ ಹಾಗೂ ಅವರ ಪುತ್ರ ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನ ಭೇಟಿ ಮಾಡಿ ಸಾಂತ್ವನ ಹೇಳಿದರು. ಪಿ.ಎಂ.ಪ್ರಸನ್ನ ಅವರು ಕುಟುಂಬಸ್ಥರಿಗೆ ವೈಯಕ್ತಿಕ ಸಹಾಯ ಮಾಡುವುದಾಗಿ ಭರವಸೆ ನೀಡಿ ಹತ್ತು ಸಾವಿರ ರೂ. ಧನಸಹಾಯ ಮಾಡಿದ್ದಲ್ಲದೆ, ಶ್ರದ್ಧಾ ಕಾರ್ಯಕ್ಕೆ ಬರುವ ಖರ್ಚು ಭರಿಸುವುದಾಗಿ ಸಹ ಭರವಸೆ ನೀಡಿದರು. ಪುರಸಭೆ ಸದಸ್ಯ ಪಿ.ಸಿ.ಕೃಷ್ಣ, ಎಪಿಎಂಸಿ ಸದಸ್ಯ ಹರೀಶ್ ಹಾಜರಿದ್ದರು.