ಕಕಮರಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ 5 ಗುಂಟೆ ಭೂದಾನ ಮಾಡಿದ ಶಿವಪ್ಪ ಜನಗೌಡ ಅವರನ್ನು ಸನ್ಮಾನಿಸಲಾಯಿತು. ಪ್ರಿಯದರ್ಶಿನಿ ಬಿರಾದಾರ, ವೆಂಕನಗೌಡ ಪಾಟೀಲ, ಗುರಪ್ಪ ಜನಗೌಡ ಇತರರಿದ್ದರು. 
ಜಿಲ್ಲೆ

ಅಂಗನವಾಡಿಗೆ 5 ಗುಂಟೆ ಭೂದಾನ

ಕಕಮರಿ: ಎಲ್ಲರಿಗೂ ದೇವರು ಅಮೂಲ್ಯ ಬದುಕು ನೀಡಿದ್ದಾನೆ. ಅದನ್ನು ಮತ್ತಷ್ಟು ಸುಂದರಗೊಳಿಸಲು ನಿರಂತರ ಪ್ರಯತ್ನ ಹಾಗೂ ಶ್ರಮ ಅಗತ್ಯ ಎಂದು ಅಮ್ಮಾಜೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ಅಪ್ಪುಗೌಡ ಪಾಟೀಲ ಹೇಳಿದರು.

ಗ್ರಾಮದ ಹೊರವಲಯದ ಮಟ್ಟಿಖೋಡಿ ಅಮ್ಮಾಜೇಶ್ವರಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಭೂದಾನಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಶಿವಪ್ಪ ಜನಗೌಡ ಅವರು ಮಟ್ಟಿಖೋಡಿಯಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ 5 ಗುಂಟೆ ಜಾಗ ದಾನ ನೀಡಿದ್ದಾರೆ. ಪ್ರಸ್ತುತ್ ದಿನಗಳಲ್ಲಿ ಸಾಮಾಜಿಕ ಕಳಕಳಿ ಹಾಗೂ ಸೇವಾ ಮನೋಭಾವದ ದಾನಿಗಳು ಸಿಗುವುದು ಅಪರೂಪ. ಪ್ರತಿಯೊಬ್ಬರು ತಮ್ಮ ದುಡಿಮೆಯಲ್ಲಿ ಅಲ್ಪವಾದರೂ ದಾನ, ಧರ್ಮ ಮಾಡಿ ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಪ್ರಿಯದರ್ಶಿನಿ ಬಿರಾದಾರ, ತಾಪಂ ಮಾಜಿ ಸದಸ್ಯ ವೆಂಕನಗೌಡ ಪಾಟೀಲ, ಗುರಪ್ಪ ಜನಗೌಡ, ಗ್ರಾಪಂ ಸದಸ್ಯರಾದ ಕಲ್ಲಪ್ಪ ತಂಗಡಿ, ಸಂಗಮೇಶ ಪುಠಾಣಿ, ಸಿದ್ದಪ್ಪ ಬಿಳ್ಳೂರ, ರಾಮಣ್ಣ ಆಜೂರ, ಸಿದಗಿರಿ ಅಡಹಳ್ಳಿ, ಭೀಮಪ್ಪ ಜನಗೌಡ ಇತರರಿದ್ದರು.

ಕಕಮರಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ 5 ಗುಂಟೆ ಭೂದಾನ ಮಾಡಿದ ಶಿವಪ್ಪ ಜನಗೌಡ ಅವರನ್ನು ಸನ್ಮಾನಿಸಲಾಯಿತು. ಪ್ರಿಯದರ್ಶಿನಿ ಬಿರಾದಾರ, ವೆಂಕನಗೌಡ ಪಾಟೀಲ, ಗುರಪ್ಪ ಜನಗೌಡ ಇತರರಿದ್ದರು.