ಮಾದೂರು ಗ್ರಾಮದಲ್ಲಿ ಅಂಗವಿಕಲರು ಮತ್ತು ಪಾಲಕರ ಒಕ್ಕೂಟದ ಸ್ಥಳೀಯ ಘಟಕದಿಂದ ಅಂಗವಿಕಲರ ದಿನ ಆಚರಿಸಲಾಯಿತು. ಒಕ್ಕೂಟದ ಗ್ರಾಮ ಘಟಕದ ಅಧ್ಯಕ್ಷ ಬಿ.ಯು.ದುರುಗಪ್ಪ, ಗ್ರಾಪಂ ಅಧ್ಯಕ್ಷೆ ನಿಂಗಮ್ಮ ತಿಮ್ಮಪ್ಪ ಕಾಗಪ್ಪನವರ್, ಸದಸ್ಯ ಗುಡ್ಡಪ್ಪ, ಪ್ರಮುಖರಾದ ಎಂ.ಬಿ.ಬಸವರಾಜ್, ಎ.ಗಂಗಾಧರ, ಸಿದ್ದಪ್ಪ ಪೂಜಾರ್, ಪಿಡಿಒ ಶಿವರಾಜ್ ಇದ್ದರು. 
ಜಿಲ್ಲೆ

ಶೇ.5 ಅನುದಾನ ಸಮರ್ಪಕ ಬಳಕೆಯಾಗಲಿ

ಹಗರಿಬೊಮ್ಮನಹಳ್ಳಿ: ತಾಲೂಕಿನ ಮಾದೂರು ಗ್ರಾಪಂ ಕಚೇರಿ ಬಳಿ ಶನಿವಾರ ಅಂಗವಿಕಲರು ಮತ್ತು ಪಾಲಕರ ಒಕ್ಕೂಟದ ಸ್ಥಳೀಯ ಘಟಕದಿಂದ ವಿಶ್ವ ಅಂಗವಿಕಲರ ದಿನ ಆಚರಿಸಲಾಯಿತು.

ಒಕ್ಕೂಟದ ಗ್ರಾಮ ಘಟಕದ ಅಧ್ಯಕ್ಷ ದುರುಗಪ್ಪ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ 5 ಸಾವಿರ ರೂ. ಮಾಸಾಶನ ನೀಡಬೇಕು. ಎಲ್ಲ ಇಲಾಖೆಗಳಲ್ಲಿ ಮೀಸಲಾಗಿರುವ ಶೇ.5 ಅನುದಾನವನ್ನು ಅಂಗವಿಕಲರ ಕ್ಷೇಮಾಭಿವೃದ್ಧಿಗಾಗಿಯೇ ಬಳಸಬೇಕು. ಅಲ್ಲದೆ, ಸರ್ಕಾರಿ ಉದ್ಯೋಗದಲ್ಲಿ ಶೇ.4 ಮೀಸಲಾತಿ ಕೂಡಲೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಗ್ರಾಪಂ ಅಧ್ಯಕ್ಷೆ ನಿಂಗಮ್ಮ ತಿಮ್ಮಪ್ಪ ಕಾಗಪ್ಪನವರ್, ಸದಸ್ಯ ಗುಡ್ಡಪ್ಪ, ಪ್ರಮುಖರಾದ ಎಂ.ಬಿ.ಬಸವರಾಜ್, ಎ.ಗಂಗಾಧರ, ಬಿ.ಸಂತೋಷ್, ಗ್ರಾಪಂ ನರೇಗಾ ಯೋಜನೆಯ ಸಂಪನ್ಮೂಲ ವ್ಯಕ್ತಿ ಸಿದ್ದಪ್ಪ ಪೂಜಾರ್, ಪಿಡಿಒ ಶಿವರಾಜ್, ಸಿಬ್ಬಂದಿ ಕೊಟ್ರೇಶ್, ಕವಿತಾ, ಜಿ.ಕೆ.ಎಂ.ವೀಣಾ ಇತರರಿದ್ದರು.