ಜಿಲ್ಲೆ

ಐವರಿಗೆ ಪ್ರಥಮ ಸಂಪರ್ಕ ಸೋಂಕು

Dakshina Kannada

ಮಂಗಳೂರು: ಐದು ದಿನದ ಹಿಂದೆ ವರದಿಯಾದ ಕರೊನಾ ಪಾಸಿಟಿವ್ ರೋಗಿಯೊಬ್ಬರ ಪ್ರಾಥಮಿಕ ಸಂಪರ್ಕದ ಮೂವರು ಸೇರಿದಂತೆ ಬುಧವಾರ ಒಟ್ಟು 8 ಕರೊನಾ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿವೆ.

ಜೂನ್ 6ರಂದು ಬೆಂಗಳೂರಿನಿಂದ ಬಂದಿದ್ದ ಬೋಳಾರ ಮೂಲದ ವ್ಯಕ್ತಿಯೊಬ್ಬರು ತೀವ್ರ ಉಸಿರಾಟದ ತೊಂದರೆಗೊಳಪಟ್ಟಿದ್ದು, ಅವರ ಗಂಟಲದ್ರವ ಪರೀಕ್ಷೆಯಲ್ಲಿ ಪಾಸಿಟಿವ್ ಇತ್ತು. ಅವರ ಜತೆ ಪ್ರಥಮ ಸಂಪರ್ಕಕ್ಕೊಳಪಟ್ಟ ಇಬ್ಬರು ಮಹಿಳೆಯರು ಹಾಗೂ ಓರ್ವ ಬಾಲಕಿಗೂ ಈಗ ಸೋಂಕು ದೃಢಪಟ್ಟಿದೆ. ಅವರನ್ನು ಈ ಮೊದಲು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಅಲ್ಲದೆ ಇನ್ನೂ ಇಬ್ಬರು ಪ್ರಾಥಮಿಕ ಸಂಪರ್ಕದಿಂದ ಕರೊನಾ ಸೋಂಕಿಗೊಳಗಾದವರು ಇದ್ದಾರೆ.

ಸೌದಿ ಅರೇಬಿಯಾದಿಂದ ಆಗಮಿಸಿದ ಇಬ್ಬರು, ಮುಂಬೈನಿಂದ ಆಗಮಿಸಿದ್ದ ಒಬ್ಬರು ಬುಧವಾರದ ಪ್ರಕರಣಗಳಲ್ಲಿ ಸೇರಿದ್ದಾರೆ. ಕರೊನಾದಿಂದ ಮುಕ್ತವಾದ 60 ವರ್ಷದ ವ್ಯಕ್ತಿಯೊಬ್ಬರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಕಾಸರಗೋಡಿನಲ್ಲಿ 9 ಮಂದಿಗೆ ಸೋಂಕು

ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರ 9 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿರುವುದಾಗಿ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ. ಸೋಂಕು ಖಚಿತಗೊಂಡವರಲ್ಲಿ 7 ಮಂದಿ ವಿದೇಶಗಳಿಂದ ಹಾಗೂ ಇಬ್ಬರು ಮಹಾರಾಷ್ಟ್ರದಿಂದ ಆಗಮಿಸಿದ್ದಾರೆ. ಬುಧವಾರ ಕೇರಳದಲ್ಲಿ ಒಟ್ಟು 75 ಮಂದಿಗೆ ಪಾಸಿಟಿವ್ ಬಂದಿದೆ.