ಜಿಲ್ಲೆ

ಸಹಕಾರ ಸಂಘಕ್ಕೆ 5.94 ಲಕ್ಷ ರೂ. ಲಾಭ

ತ್ಯಾಗರ್ತಿ: ತ್ಯಾಗರ್ತಿ ಕೃಷಿ ಪತ್ತಿನ ಸಹಕಾರ ಸಂಘ 5.94 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಎನ್.ಶ್ರೀಧರಮೂರ್ತಿ ಹೇಳಿದರು. ಶುಕ್ರವಾರ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿ, ಕಳೆದ ಸಾಲಿಗಿಂತಲೂ ಹೆಚ್ಚಿನ ವ್ಯಾಪಾರ- ವಹಿವಾಟು ನಡೆಸುವ ಮೂಲಕ ಸಂಘ ಪ್ರಗತಿ ಸಾಧಿಸಿದೆ. ಕ್ಯಾಂಪ್ಕೋ ಸಹಯೋಗದಲ್ಲಿ ಅಡಕೆ ಖರೀದಿ ಕೇಂದ್ರ ಪ್ರಾರಂಭಿಸಲಾಗಿದೆ. ಎಲ್ಲರ ಸಹಕಾರದಿಂದ 2022-23ನೇ ಸಾಲಿನಲ್ಲಿ ಸಂಘಕ್ಕೆ ಜಿಲ್ಲಾಮಟ್ಟದ ಅತ್ಯುತ್ತಮ ಕೃಷಿ ಪತ್ತಿನ ಸಹಕಾರ ಸಂಘ ಎಂಬ ಪ್ರಶಸ್ತಿ ದೊರೆತಿದೆ ಎಂದು ಹೇಳಿದರು. ಹವಾಮಾನ ಆಧಾರಿತ ಬೆಳೆ ವಿಮೆ ಸೌಲಭ್ಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಬೇಕು ಎಂದು ಸದಸ್ಯರು ಆಗ್ರಹಿಸಿದರು. ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ ಮೇಳ ಹಮ್ಮಿಕೊಳ್ಳಲಾಗಿತ್ತು. ಉಪಾಧ್ಯಕ್ಷ ಎಚ್.ಚೇತನ, ಸದಸ್ಯರಾದ ಗಿರೀಶ್, ವೀರಪ್ಪ ಗೌಡ, ಎಂ.ಎಲ್.ಗಣಪತಿ, ದೇವರಾಜಪ್ಪ, ಟಿ.ವಿ.ಶ್ರೀನಿವಾಸ್, ಕೆ.ಬಿ.ಹೊಳಿಯಪ್ಪ, ಶಾಂತಮ್ಮ, ನೀಲಮ್ಮ, ಎನ್.ಎಚ್.ಮಂಜಪ್ಪ, ಕಾರ್ಯದರ್ಶಿ ಜೈಕುಮಾರ್ ಇದ್ದರು.