ಜಿಲ್ಲೆ

5.88 ಲಕ್ಷ ರೂ. ವಂಚನೆ

ಮರಿದೇವ ಹೂಗಾರ

ಹುಬ್ಬಳ್ಳಿ: ಪಾರ್ಟ್​ಟೈಮ್ ಜಾಬ್ ಕೊಡುವುದಾಗಿ ನಂಬಿಸಿದ ಅಪರಿಚಿತನೊಬ್ಬ, ನಗರದ ಕೆಎಚ್​ಬಿ ಕಾಲನಿಯ ಮಹಿಳೆಯೊಬ್ಬರಿಂದ 5.88 ಲಕ್ಷ ರೂ. ಆನ್​ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

ಇನ್​ಸ್ಟಾಗ್ರಾಂ ಮೂಲಕ ಮಹಿಳೆಯನ್ನು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿ, ವಿಡಿಯೋ ಲಿಂಕ್ ಕಳುಹಿಸಿದ್ದಾನೆ. ಅಲ್ಲಿದ್ದ ಲಿಂಕ್ ತೆರೆದಾಗ ವಾಟ್ಸ್ ಆಪ್​ಗೆ ಪಾರ್ಟ್​ಟೈಮ್ ಕೆಲಸ ನೀಡುವುದಾಗಿ ಹೇಳಿ ನೋಂದಣಿ ಮಾಡಿಸಿಕೊಂಡಿದ್ದಾನೆ. ಬಳಿಕ ಟೆಲಿಗ್ರಾಂ ಮೂಲಕ ಸಂರ್ಪಸಿ ಕೆಲ ಟಾಸ್ಕ್ ನೀಡಿ, ಲಾಭ ನೀಡುವುದಾಗಿ ಮಹಿಳೆಯ ಬ್ಯಾಂಕ್ ಖಾತೆ ಮಾಹಿತಿ ಪಡೆದು ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಸಿಇಎನ್ ಕ್ರೖೆಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.