Transparent umbrella under heavy rain against water drops splash background. Rainy weather concept. 
ಜಿಲ್ಲೆ

ಜಿಲ್ಲೆಯಲ್ಲಿ ೫.೮೧ ಮಿ.ಮೀ ಮಳೆ

ಆದರ್ಶ್. ಎಂ.ಕೆ.

ಮಡಿಕೇರಿ: ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೫.೮೧ ಮಿ.ಮೀ. ಮಳೆಯಾಗಿದೆ.


ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೧೨.೭೩ ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೦.೮೭ ಮಿ.ಮೀ. ಮಳೆ, ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೩.೮೩ ಮಿ.ಮೀ. ಮಳೆಯಾಗಿದೆ. ಜಿಲ್ಲೆಯ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೯.೨೦, ನಾಪೋಕ್ಲು ೬.೨೦ , ಸಂಪಾಜೆ ೨೨.೫೦, ಭಾಗಮಂಡಲ ೧೩, ವಿರಾಜಪೇಟೆ ಕಸಬಾ ೧, ಶ್ರೀಮಂಗಲ ೨.೨೦ ಪೊನ್ನಂಪೇಟೆ ೨, ಸೋಮವಾರಪೇಟೆ ಕಸಬಾ ೨.೬೦, ಶನಿವಾರಸಂತೆ ೩.೮೦, ಶಾಂತಳ್ಳಿ ೧೩, ಕೊಡ್ಲಿಪೇಟೆ ೧.೬೦, ಸುಂಟಿಕೊಪ್ಪ ೨ ಮಿ.ಮೀ.ಮಳೆಯಾಗಿದೆ.


ಹಾರಂಗಿ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ ೨,೮೫೯ ಅಡಿಗಳಾಗಿದ್ದು, ೨೮೫೮.೬೫ ಅಡಿ ನೀರಿದೆ. ಇಂದಿನ ನೀರಿನ ಒಳಹರಿವು ೨೮೩೦ ಕ್ಯೂಸೆಕ್ ಇದ್ದು, ನೀರಿನ ಹೊರ ಹರಿವು ನದಿಗೆ ೨೮೦೦ ಕ್ಯೂಸೆಕ್ ಇದೆ.