ಶಿವಮೊಗ್ಗ ಸೈಬರ್ ಠಾಣೆ. 
ಜಿಲ್ಲೆ

ಹಣ ಹೂಡಿಕೆ ಮಾಡಿದ್ದ ಇಂಜಿನಿಯರ್‌ಗೆ 5.75 ಲಕ್ಷ ರೂ. ವಂಚನೆ

ಶಿವಮೊಗ್ಗ: ಆನ್‌ಲೈನ್ ಮೂಲಕ ಹಣ ಹೂಡಿಕೆ ಮಾಡಿ ಲಾಭಾಂಶ ಪಡೆಯಲು ಹೋಗಿ ಭದ್ರಾವತಿಯ ಇಂಜಿನಿಯರ್‌ವೊಬ್ಬರು 5.75 ಲಕ್ಷ ರೂ. ವಂಚನೆಗೆ ಒಳಗಾಗಿದ್ದಾರೆ.

ಭದ್ರಾವತಿ 27 ವರ್ಷದ ಇಂಜಿನಿಯರ್ ಮೋಸ ಹೋದವರು. ಟಿಕೆ ಗೋಲ್ಡ್ ಟ್ರೇಡಿಂಗ್ ಗ್ರೂಪ್ ಎ230ಕ್ಕೆ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿದ್ದು ಹಣ ಹೂಡಿಕೆ ಬಗ್ಗೆ ಲಾಭಾಂಶ ಗಳಿಸುವ ಬಗ್ಗೆ ಮಾಹಿತಿಗಳನ್ನು ಗ್ರೂಪ್‌ನಲ್ಲಿ ವಿನಿಮಯ ಮಾಡಿಕೊಳ್ಳಲಾಗುತ್ತದೆ.
ಅದೇ ಗ್ರೂಪ್‌ನಲ್ಲಿದ್ದ ಇಂಜಿನಿಯರ್‌ಗೆ ಕ್ರಿಸ್ ಹೆಸರಿನ ವ್ಯಕ್ತಿ ಪ್ರತ್ಯೇಕವಾಗಿ ಚಾಟ್ ಮಾಡಿ ಹಣ ಹೂಡಿಕೆ ಮಾಡಿ ಲಾಭ ಪಡೆಯುವ ಬಗ್ಗೆ ಹೇಳಿ ಲಿಂಕ್ ಕಳುಹಿಸಿದ್ದರು. ಆತನ ಮಾತು ನಂಬಿದ ಇಂಜಿನಿಯರ್ ಲಿಂಕ್‌ನಲ್ಲಿದ್ದ ಕ್ಯೂಆರ್ ಕೋಡ್‌ಗೆ ವಿವಿಧ ಹಂತದಲ್ಲಿ 5,75,525 ರೂ. ಹೂಡಿಕೆ ಮಾಡಿದ್ದರು. ತದನಂತರ ಮೋಸ ಹೋಗಿರುವುದು ಗಮನಕ್ಕೆ ಬಂದಿದ್ದು ಇಂಜಿನಿಯರ್ ಇದೀಗ ಶಿವಮೊಗ್ಗ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.