ಇಟಗಿ: ಗ್ರಾಮದ ಭಾಗ್ಯಲಕ್ಷ್ಮೀ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ 6.19 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದ್ದು, ಸದಸ್ಯರಿಗೆ 5.61 ಕೋಟಿ ರೂ. ವಿವಿಧ ಸಾಲ ವಿತರಿಸಿದೆ ಎಂದು ಸಂಘದ ಅಧ್ಯಕ್ಷೆ ಮುಕ್ತಾ ಲದ್ದಿಮಠ ಹೇಳಿದರು.
ಗ್ರಾಮದ ಸಂಘದಲ್ಲಿ ಈಚೆಗೆ ಹಮ್ಮಿಕೊಂಡಿದ್ದ 15ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸದಸ್ಯರಿಂದ 5.95 ಕೋಟಿ ರೂ. ಠೇವಣಿ ಸಂಗ್ರಹಿಸಿದೆ. ಪ್ರಸಕ್ತ ಸಾಲಿನಲ್ಲಿ 2.61 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.10 ಲಾಭಾಂಶ ವಿತರಿಸಲಾಗುವುದು ಎಂದರು.
ಕಾರ್ಯದರ್ಶಿ ಗೀತಾ ನಿಲಜಕರ ಜಮಾ-ಖರ್ಚು, ಲಾಭ -ಹಾನಿ ಹಾಗೂ ಅಢಾವೆ ಪತ್ರಿಕೆ ಓದಿದರು. ಉಪಾಧ್ಯಕ್ಷೆ ರೇಖಾ ಸತ್ಯಪ್ಪಗೋಳ, ನಿರ್ದೇಶಕರಾದ ಚನ್ನಮ್ಮ ಬಡಿಗೇರ, ರೇಷ್ಮಾ ನಾಯ್ಕ, ನಿರ್ಮಲಾ ಸೋಣಪ್ಪನವರ, ಶೈಲಾ ಕಲಾಲ, ಬಾಳವ್ವ ಗಂಗನಾಯ್ಕ, ನಬೀಮಾ ನದ್ಾ, ರೂಪಾಲಿ ಸೋನಪ್ಪನವರ, ಅಂಜನಾ ಭೋವಿ, ಶಾಬೀರಾ ನದ್ಾ ಇತರರಿದ್ದರು. ಮಹಾಲಕ್ಷ್ಮೀ ಕರ್ಮಳ್ಳನವರ ಸ್ವಾಗತಿಸಿದರು. ಆಶಾ ಕಮ್ಮಾರ ನಿರೂಪಿಸಿದರು. ದೀಪಾ ತುರಮರಿ ವಂದಿಸಿದರು.