ಮೈಸೂರು: ಸೈಬರ್ ಕಳ್ಳರು ನಗರದ ಯುವಕನಿಗೆ 5.29 ಲಕ್ಷ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ. ಬನ್ನಿಮಂಟಪ ನಿವಾಸಿ ಮಹಮ್ಮದ್ ಗೌಸ್ ಹಣ ಕಳೆದುಕೊಂಡವರು.
ಆನ್‌ಲೈನ್ ಮೂಲಕ ಕಂಪನಿಯೊಂದರಲ್ಲಿ ಕೆಲಸ ಪಡೆದು ಕೊಂಡಿದ್ದ ಮಹಮ್ಮದ್ ಗೌಸ್‌ಗೆ ಕಂಪನಿ ಸಿಬ್ಬಂದಿ ಎಂದು ಹೇಳಿಕೊಂಡು ಕೆಲವರು ವಂಚಿಸಿದ್ದಾರೆ. ನೀವು ಕೂಡ ಹಣ ಹೂಡಿಕೆ ಮಾಡಬಹುದು ಎಂದು ಆಮೀಷ ಒಡ್ಡಿದ್ದಾರೆ.
ಹಾಗಾಗಿ, ಮಹಮ್ಮದ್ ಗೌಸ್ ಹಂತಹಂತವಾಗಿ 5.29 ಲಕ್ಷ ರೂ. ಹಣವನ್ನು ಕಂಪನಿಯವರಿಗೆ ಪಾವತಿಸಿದ್ದಾರೆ. ನಂತರ ಕಂಪನಿಯಿಂದ ಯಾವುದೇ ಹಣ ಬರಲಿಲ್ಲ ಎಂದು ದೂರು ನೀಡಿದ್ದಾರೆ. ಈ ಸಂಬಂಧ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.