ಹಳಿಯಾಳ: ಇಂಡಿಯಾ ಸ್ಕೀಲ್ಸ್-24 ರಾಷ್ಟ್ರಮಟ್ಟದ ಕೌಶಲ ಸ್ಪರ್ಧೆಯ ರೆಫ್ರಿಜರೇಷನ್ ಆ್ಯಂಡ್ ಏರ್ ಕಂಡಿಷನಿಂಗ್ ವಿಭಾಗದಲ್ಲಿ ಹಳಿಯಾಳದ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ಅಕ್ಷಯ ಜೈನ 4ನೇ ಸ್ಥಾನ ಪಡೆದು ಮೆಡಾಲಿಯನ್ ಆಫ್ ಎಕ್ಸಲೆನ್ಸ್ ಪ್ರಶಸ್ತಿ ಪಡೆದಿದ್ದಾರೆ.
ನವದೆಹಲಿಯ ಯಶೋಭೂಮಿ ಪ್ರದರ್ಶನ ಪ್ರಾಂಗಣದಲ್ಲಿ ಒಂದು ವಾರ ಜರುಗಿದ ಸ್ಪರ್ಧೆಯಲ್ಲಿ ಸುಮಾರು 30 ರಾಜ್ಯದ 900ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು.
ಸ್ಪರ್ಧೆಯಲ್ಲಿ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ 41ವಿದ್ಯಾರ್ಥಿಗಳು ರಾಜ್ಯ ಮಟ್ಟದ ಹಂತಕ್ಕೆ ಪ್ರವೇಶಿಸಿದ್ದು ಇಬ್ಬರು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಪ್ರತಿನಿಧಿಸಿದ್ದು ವಿಶೇಷವಾಗಿತ್ತು. ವಸ್ತ್ರವಿನ್ಯಾಸ ವಿಭಾಗದಿಂದ ವಿದ್ಯಾರ್ಥಿನಿ ರೇಣುಕಾ ಕಾಕತ್ಕರ ರಾಜ್ಯವನ್ನು ಪ್ರತಿನಿಧಿಸಿದ್ದರು.