ಜಿಲ್ಲೆ

ಸೆ.ನಲ್ಲಿ 4ನೇ ಮೆಟ್ರೋ ರೈಲು ಸಂಚಾರ

ಪವನ್ ಆಚಾರ್ಯ ನೀರ್ಚಾಲು

ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗದ 4ನೇ ರೈಲಿನ ವಾಣಿಜ್ಯ ಸಂಚಾರ ಸೆಪ್ಟೆಂಬರ್​ ಮೊದಲ ವಾರದಲ್ಲಿ ಪ್ರಾರಂಭಗೊಳ್ಳಲಿದ್ದು, ಈ ಮಾರ್ಗದ ರೈಲುಗಳ ಅಂತರ 25 ನಿಮಿಷದಿಂದ 20 ನಿಮಿಷಕ್ಕೆ ಇಳಿಯಲಿದೆ.

ಆಗಸ್ಟ್​ ಮಧ್ಯದಲ್ಲೇ ನಾಲ್ಕನೇ ರೈಲಿನ ಎಲ್ಲ ಆರು ಸೆಟ್​ಗಳು ಬಿಎಂಆರ್​ಸಿಎಲ್​ನ ಹೆಬ್ಬಗೋಡಿ ಡಿಪ್ಪೋಗೆ ಬಂದು ಸೇರಿದ್ದು, ಸಿಗ್ನಲ್​ ಸೇರಿ ಎಲ್ಲ ಪರೀೆಗಳು ಮುಗಿದ ಬಳಿಕ ವಾಣಿಜ್ಯ ಸಂಚಾರಕ್ಕೆ ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ ತಿಂಗಳಿಗೊಂದರಂತೆ ಹಳದಿ ಮಾರ್ಗದ ಮೆಟ್ರೋ ರೈಲು ಸೆಟ್​ಗಳು ಡಿಪೋ ಸೇರುವ ನಿರೀೆ ಇದೆ ಎಂದು ಬಿಎಂಆರ್​ಸಿಎಲ್​ನ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ರೈಡರ್​ಶಿಪ್​ ಇಳಿಕೆ: ಹಳದಿ ಮಾರ್ಗ ಆರಂಭದ ನಂತರ ರೈಡರ್​ಶಿಪ್​ 9&10 ಲಕ್ಷದ ಮಧ್ಯೆ ಇತ್ತು. ಆದರೆ, ಗೌರಿ&ಗಣೇಶ ಹಬ್ಬದ ನಿಮಿತ್ತ ರಾಜಧಾನಿಯ ಜನರು ಹಬ್ಬ ಆಚರಣೆಗೆ ಊರುಗಳಿಗೆ ತೆರಳಿದ ಹಿನ್ನೆಲೆಯಲ್ಲಿ ಮೆಟ್ರೋ ರೈಡರ್​ಶಿಪ್​ನಲ್ಲಿ ದೊಡ್ಡ ಬದಲಾವಣೆ ಕಂಡಿದೆ. ಸುಮಾರು ಅರ್ಧಕ್ಕೆ ಅರ್ಧ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಿರುವುದು ಆಶ್ಚರ್ಯಕರ ಸಂಗತಿ. ಮುಂದಿನ ದಿನಗಳಲ್ಲಿ ಸರಾಸರಿ ಪ್ರಯಾಣಿಕರ ಸಂಖ್ಯೆ ಮತ್ತೆ ಯಥಾಸ್ಥಿತಿ ಬರುವ ನಿರೀೆ ಇದೆ.