ವಿಜಯವಾಣಿ ಸುದ್ದಿಜಾಲ ಮೂಲ್ಕಿ
ಗ್ರಾಮೀಣ ಕೃಷಿಕರ ಆರ್ಥಿಕ ಅಭಿವೃದ್ಧಿಯ ಹಿತದೃಷ್ಟಿಯಿಂದ ಸ್ಥಾಪಿತವಾದ ಸಂದ ಅಭಿವೃದ್ಧಿಗೆ ನಿರ್ದೇಶಕರು, ಸದಸ್ಯರು ಹಾಗೂ ಸಿಬ್ಬಂದಿಯ ಪ್ರಾವಾಣಿಕ ಶ್ರಮ ಕಾರಣವಾಗಿದ್ದು, ಈ ಬಾರಿ ಶೇ.15 ಡಿವಿಡೆಂಡ್ ನೀಡುವ ಜತೆಗೆ ಮುಂದಿನ ದಿನಗಳಲ್ಲಿ ಕೃಷಿಗೆ ಮತ್ತು ಶಿಕ್ಷಣಕ್ಕೆ ಮತ್ತಷ್ಟು ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದು ಮೂಲ್ಕಿ ವಿಜಯ ರೈತರ ಸೇವಾ ಸಹಕಾರಿ ಸಂದ ಅಧ್ಯಕ್ಷ ರಂಗನಾಥ ಶೆಟ್ಟಿ ಹೇಳಿದರು.
ಮೂಲ್ಕಿಯಲ್ಲಿ ಭಾನುವಾರ ಮೂಲ್ಕಿ ವಿಜಯ ರೈತರ ಸೇವಾ ಸಹಕಾರಿ ಸಂದ 48ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ವಾತನಾಡಿದರು. ಶಾಖಾಧಿಕಾರಿ ಚಂದ್ರಕಾಂತ ಶೆಟ್ಟಿ ಪಂಜಿನಡ್ಕ 2023-24ನೇ ವರ್ಷದ ವರದಿ, ಲೆಕ್ಕಪತ್ರ ಮಂಡಿಸಿದರು.
ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ವಿಜೇತ ಡಾ.ಹರೀಶ್ಚಂದ್ರ ಪಿ.ಸಾಲ್ಯಾನ್, ಪ್ರಗತಿಪರ ಕೃಷಿಕರಾದ ಕರುಣಾಕರ ಶೆಟ್ಟಿ ಉಳೆಪಾಡಿ, ಕೃಷ್ಣ ಬಿ.ಶೆಟ್ಟಿ ಕರ್ನೀರೆ, ಮನೋಹರಿ ಶೆಟ್ಟಿ ಅತಿಕಾರಿಬೆಟ್ಟು ಅವರನ್ನು ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.
ಮುಖ್ಯ ಅತಿಥಿಗಳಾಗಿ ಸಂಘದ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಆಡಳಿತ ನಿರ್ದೇಶಕ ಶಿವರಾಮ ಶೆಟ್ಟಿ, ನಿರ್ದೇಶಕರಾದ ಗಂಗಾಧರ ಶೆಟ್ಟಿ, ಅಶೋಕ್ ಕುವಾರ್ ಚಿತ್ರಾಪು, ನರಸಿಂಹ ಪೂಜಾರಿ, ದೇವಪ್ರಸಾದ್, ಪುಷ್ಪಾ ಎಂ., ಪದ್ಮಿನಿ ವಿ.ಶೆಟ್ಟಿ, ರಾಜೇಶ್ ಶೆಟ್ಟಿ, ರಾಮ ನಾಯ್ಕ, ನಂಜುಂಡ ಆರ್.ಕೆ., ಬ್ಯಾಂಕ್ ಆಫ್ ಬರೋಡದ ಶಾಖಾಧಿಕಾರಿ ಪ್ರಜ್ವಲ್ ಕೆ.ಹೆಗ್ಡೆ ಮತ್ತಿತರರಿದ್ದರು. ಗಂಗಾಧರ ಶೆಟ್ಟಿ ಸ್ವಾಗತಿಸಿದರು. ಮನೋಹರ ಕೋಟ್ಯಾನ್, ರೇಖಾ ಎಂ.ಶೆಟ್ಟಿ ನಿರೂಪಿಸಿದರು.