ವಿಜಯವಾಣಿ ಸುದ್ದಿಜಾಲ ಉಡುಪಿ
ಮಹಾಲಕ್ಷ್ಮೀ ಕೋ-ಆಪರೇಟೀವ್ ಬ್ಯಾಂಕ್ ನಿರಂತರ 15 ವರ್ಷದಿಂದ ಹೆಚ್ಚು ಡಿವಿಡೆಂಡ್ ನೀಡುವ ಕರಾವಳಿ ಭಾಗದ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸದಸ್ಯರು, ಗ್ರಾಹಕರ ವಿಶ್ವಾಸ ಹಾಗೂ ಸಹಕಾರದಿಂದ ಬ್ಯಾಂಕ್ ಈ ಬಾರಿ ಸಾರ್ವಕಾಲಿಕ ಗರಿಷ್ಠ ಲಾಭ ದಾಖಲಿಸಿದ್ದು, ಆರ್ಥಿಕವಾಗಿ ಸದೃಢವಾಗಿದೆ ಎಂದು ಬ್ಯಾಂಕ್ನ ಅಧ್ಯಕ್ಷ ಹಾಗೂ ಶಾಸಕ ಯಶ್ಪಾಲ್ ಸುವರ್ಣ ಸಂತಸ ವ್ಯಕ್ತಪಡಿಸಿದರು.
ಉಡುಪಿಯ ಪುರಭವನದಲ್ಲಿ ಸೆಪ್ಟೆಂಬರ್ 7ರಂದು ಬೆಳಗ್ಗೆ ಆಯೋಜಿಸಿದ್ದ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ನ 2024--25ನೇ ಸಾಲಿನ 47ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಈ ಬಾರಿ ಶೇ.15 ಡಿವಿಡೆಂಡ್ ನೀಡಲಾಗುವುದು ಎಂದು ಘೋಷಿಸಿದರು.
ನಾಡೋಜ ಡಾ.ಜಿ.ಶಂಕರ ಮಾತನಾಡಿ, ಯಶ್ಪಾಲ್ ಸುವರ್ಣ ಅಧ್ಯಕ್ಷತೆಯಲ್ಲಿ ಬ್ಯಾಂಕ್ ನಿರಂತರವಾಗಿ ಲಾಭದಾಯಕವಾಗಿ ಸಾಗುತ್ತಿರುವುದು ಅಭಿನಂದನೀಯ. ಬ್ಯಾಂಕ್ನ ಎಲ್ಲ ಕಾರ್ಯಚಟುವಟಿಕೆಗಳಿಗೆ ಸದಾ ಸಹಕಾರ ನೀಡಲಾಗುವುದು ಎಂದರು.
ಜಿಲ್ಲಾ ಸಹಕಾರಿ ಯೂನಿಯನ್ನ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಗ್ರಾಹಕಸ್ನೇಹಿ ಸೇವೆಯೊಂದಿಗೆ ಸಮಾಸಮುಖಿ ಕಾರ್ಯಗಳ ಮೂಲಕ ಎಲ್ಲ ಸಹಕಾರಿ ಸಂಸ್ಥೆಗಳಿಗೆ ಮಹಾಲಕ್ಷ್ಮೀ ಬ್ಯಾಂಕ್ ಮಾದರಿಯಾಗಿದೆ ಎಂದರು.
ಬ್ಯಾಂಕ್ನ ನಿವ್ವಳ ಲಾಭದಲ್ಲಿ ಸಹಕಾರ ಶಿಕ್ಷಣ ನಿಧಿಗೆ 13,73,436 ರೂ.ವನ್ನು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಅವರಿಗೆ ಯಶ್ಪಾಲ್ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಆನಂದ ಸಿ. ಕುಂದರ್, ಜಯ ಸಿ. ಕೋಟ್ಯಾನ್, ಆನಂದ ಪಿ. ಸುವರ್ಣ, ಹರಿಯಪ್ಪ ಕೋಟ್ಯಾನ್, ರಾಮಚಂದ್ರ ಕುಂದರ್, ಶಿವಪ್ಪ ಟಿ. ಕಾಂಚನ್, ಮೋಹನ್ ಬೆಂಗ್ರೆ, ಉದಯ ಹಟ್ಟಿಯಂಗಡಿ, ಅನಿಲ ಬೆಂಗ್ರೆ, ಚೇತನ ಬೆಂಗ್ರೆ, ಸತೀಶ ಕುಂದರ್, ರತ್ನಾಕರ ಸಾಲ್ಯಾನ್, ದಯಾನಂದ ಕುಂದರ್, ಭಾಸ್ಕರ ಬೈಕಂಪಾಡಿ, ಬ್ಯಾಂಕ್ನ ಉಪಾಧ್ಯಕ್ಷ ವಾಸುದೇವ ಸಾಲ್ಯಾನ್, ನಿರ್ದೇಶಕರಾದ ಶಶಿಕಾಂತ ಕೋಟ್ಯಾನ್, ಶೋಭೇಂದ್ರ ಸಸಿಹಿತ್ಲು, ಕೆ.ಸಂಜೀವ ಶ್ರೀಯಾನ್, ವಿನಯ ಕರ್ಕೇರ, ನಾರಾಯಣ ಅಮೀನ್, ಸುರೇಶ ಕರ್ಕೇರ, ಶಿವರಾಮ ಕುಂದರ್, ವನಜಾ ಪುತ್ರನ್, ವನಜಾ ಕಿದಿಯೂರು, ಸದಾನಂದ ಬಳ್ಕೂರು, ಮಂಜುನಾಥ ಎಸ್.ಕೆ, ಸಿ.ಎ. ಅಜಿತಕುಮಾರ್, ಶರತ್ಕುಮಾರ್ ಶೆಟ್ಟಿ ಎನ್,, ಸಹಾಯಕ ಪ್ರಧಾನ ವ್ಯವಸ್ಥಾಪಕಿ ಶಾರಿಕಾ ಕಿರಣ ಇತರರು ಉಪಸ್ಥಿತರಿದ್ದರು.
ಬ್ಯಾಂಕ್ನ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ 100 ಕೋಟಿ ಪಾಲು ಬಂಡವಾಳ, 1,000 ಕೋಟಿ ಠೇವಣಿ ಸಂಗ್ರಹ ಹಾಗೂ 1 ಲಕ್ಷ ಗ್ರಾಹಕರನ್ನು ಹೊಂದುವ ಗುರಿಯಿದೆ. ತನ್ಮೂಲಕ ರಾಜ್ಯದ ಮಾದರಿ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆ ಹೊಂದಲು ಆಡಳಿತ ಮಂಡಳಿ ಕಾರ್ಯಪ್ರವೃತ್ತವಾಗಿದೆ. | ಯಶ್ಪಾಲ್ ಸುವರ್ಣ. ಶಾಸಕ
ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ನಾರಾಯಣ ಕರ್ಕೇರ, ಮಾಜಿ ಅಧ್ಯಕ್ಷರಾದ ದಯಾನಂದ ಸುವರ್ಣ, 216 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶಿಸಿ ವಿಶ್ವದಾಖಲೆ ಮಾಡಿದ ವಿದುಷಿ ದೀಕ್ಷಾ ವಿ., ಯೋಗ ರತ್ನ ಪುರಸ್ಕೃತೆ ತನುಶ್ರೀ ಪಿತ್ರೋಡಿ, ಆಪತ್ಬಾಂಧವ ಈಶ್ವರ ಮಲ್ಪೆ, ಬಾಕ್ಸಿಂಗ್ ಪಟು ಮಾನ್ಸಿ ಜೆ. ಸುವರ್ಣ, ಸಿಎ ಸಾಧಕರಾದ ಶಮಾ ಕುಂದರ್, ಶ್ರೇಯಾ ಶಶಿಧರ ಹಾಗೂ ರ್ಯಾಂಕ್ ವಿಜೇತೆ ಚೈತ್ರಾಲಿ ಅವರರಿಗೆ ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು.
ಮೀನುಗಾರ ಸಮುದಾಯದಿಂದ ಪ್ರವರ್ತಿತ ಮಹಾಲಕ್ಷ್ಮೀ ಬ್ಯಾಂಕ್ ಇಂದು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಕರಾವಳಿ ಜನತೆಯ ಹೆಮ್ಮೆಯ ಬ್ಯಾಂಕ್ ಆಗಿರುವುದು ಸಂತಸ ತಂದಿದೆ. | ಪ್ರಮೋದ ಮಧ್ವರಾಜ್. ಮಾಜಿ ಸಚಿವ