ಜಿಲ್ಲೆ

466 ಮಂದಿಗೆ ಕರೊನಾ ಪಾಸಿಟಿವ್

Dakshina Kannada

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 233 ಮಂದಿಗೆ ಕರೊನಾ ಪಾಸಿಟಿವ್ ಆಗಿದೆ. ಸೋಮವಾರ 8 ಮಂದಿ ಸಾವನ್ನಪ್ಪಿದ್ದಾರೆ.

ಮಂಗಳೂರಿನ 122, ಬಂಟ್ವಾಳದ 53, ಬೆಳ್ತಂಗಡಿಯ 10, ಪುತ್ತೂರಿನ 6, ಸುಳ್ಯದ 5 ಹಾಗೂ ಹೊರ ಜಿಲ್ಲೆಯ 37 ಮಂದಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 20,367ಕ್ಕೇರಿದ್ದು, 4371 ಸಕ್ರಿಯ ಪ್ರಕರಣಗಳಿವೆ. ಸೋಮವಾರ 404 ಮಂದಿ ಗುಣವಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 490 ತಲುಪಿದೆ.

ಉಡುಪಿ ಜಿಲ್ಲೆಯಲ್ಲಿ ಸೋಮವಾರ 233 ಮಂದಿಗೆ ಪಾಸಿಟಿವ್ ಆಗಿದ್ದು, ಕಾರ್ಕಳ ತಾಲೂಕಿನ 72 ವರ್ಷದ ಮಹಿಳೆ, ಉಡುಪಿಯ 70 ವರ್ಷದ ಮಹಿಳೆ ಮತ್ತು 84 ವರ್ಷದ ಪುರುಷ, ಕುಂದಾಪುರದ 66 ವರ್ಷದ ಪುರುಷ ಸೇರಿದಂತೆ 4 ಮಂದಿ ಮೃತಪಟ್ಟಿದ್ದಾರೆ.

ಉಡುಪಿಯಲ್ಲಿ 111, ಕುಂದಾಪುರದಲ್ಲಿ 55, ಕಾರ್ಕಳದಲ್ಲಿ 47, ಹೊರ ಜಿಲ್ಲೆಯ 20 ಮಂದಿಗೆ ಸೋಂಕು ತಗುಲಿದೆ. ಇದರಲ್ಲಿ 135 ಮಂದಿ ರೋಗ ಲಕ್ಷಣ ಹೊಂದಿದ್ದು, 98 ಮಂದಿಯಲ್ಲಿ ಲಕ್ಷಣಗಳಿಲ್ಲ. ಕೋವಿಡ್ ಕೇರ್ ಸೆಂಟರ್‌ನಲ್ಲಿ 71, ಹೋಂ ಐಸೋಲೇಶನ್‌ನಲ್ಲಿ 162 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. 619 ಮಂದಿಯ ವರದಿ ನೆಗೆಟಿವ್ ಬಂದಿದ್ದು, 130 ಮಂದಿಯ ವರದಿ ನಿರೀಕ್ಷಿಸಲಾಗುತ್ತಿದೆ. 792 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 66 ಮಂದಿ ಆಸ್ಪತ್ರೆಗಳಿಂದ, 212 ಮಂದಿ ಹೋಂ ಐಸೊಲೇಶನ್‌ನಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1366 ಸಕ್ರಿಯ ಪ್ರಕರಣಗಳಿದ್ದು, 815 ಮಂದಿ ಆಸ್ಪತ್ರೆಯಲ್ಲಿ, 551 ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾಸರಗೋಡು ಜಿಲ್ಲೆಯ 110 ಮಂದಿ ಸಹಿತ ರಾಜ್ಯದಲ್ಲಿ 2910 ಮಂದಿಗೆ ಸೋಮವಾರ ಕೋವಿಡ್ 19 ಬಾಧಿಸಿದೆ. 18 ಮಂದಿ ಮೃತಪಟ್ಟಿದ್ದಾರೆ. ಕಾಸರಗೋಡಿನ 176 ಮಂದಿ ಸೇರಿ ರಾಜ್ಯದಲ್ಲಿ ಕೋವಿಡ್ ಬಾಧಿಸಿ ಚಿಕಿತ್ಸೆಯಲ್ಲಿದ್ದ 3022 ಮಂದಿ ಗುಣವಾಗಿದ್ದಾರೆ.