ಹಾವೇರಿ: ಜಿಲ್ಲೆಯಲ್ಲಿ ಮಂಗಳವಾರ 465 ಜನರಿಗೆ ಕರೊನಾ ಪಾಸಿಟಿವ್ ಬಂದಿದೆ. 148 ಜನ ಗುಣವಾಗಿ ಬಿಡುಗಡೆಯಾಗಿದ್ದು, ಐವರು ಮೃತಪಟ್ಟಿದ್ದಾರೆ ಎಂದು ಪ್ರಭಾರ ಡಿಎಚ್ಒ ಡಾ. ಎಂ. ಜಯಾನಂದ ತಿಳಿಸಿದ್ದಾರೆ.
ರಾಣೆಬೆನ್ನೂರ ತಾಲೂಕಿನಲ್ಲಿ ಅತಿಹೆಚ್ಚು 174, ಹಾವೇರಿ ತಾಲೂಕಿನಲ್ಲಿ 76, ಹಾನಗಲ್ಲ ತಾಲೂಕಿನಲ್ಲಿ 54, ಶಿಗ್ಗಾಂವಿ ತಾಲೂಕಿನಲ್ಲಿ 48, ಬ್ಯಾಡಗಿ ತಾಲೂಕಿನಲ್ಲಿ 43, ಸವಣೂರ ತಾಲೂಕಿನಲ್ಲಿ 39, ಹಿರೇಕೆರೂರ ತಾಲೂಕಿನಲ್ಲಿ 29 ಹಾಗೂ ಇತರೆ ಇಬ್ಬರು ಸೇರಿ ಪಾಸಿಟಿವ್ ವರದಿಯಾಗಿದೆ.
ರಾಣೆಬೆನ್ನೂರ ತಾಲೂಕಿನಲ್ಲಿ 27, ಹಾನಗಲ್ಲ ತಾಲೂಕಿನಲ್ಲಿ 26, ಶಿಗ್ಗಾಂವಿ ತಾಲೂಕಿನಲ್ಲಿ 24, ಹಾವೇರಿ ತಾಲೂಕಿನಲ್ಲಿ 23, ಬ್ಯಾಡಗಿ ತಾಲೂಕಿನಲ್ಲಿ 19, ಹಿರೇಕೆರೂರ ತಾಲೂಕಿನಲ್ಲಿ 15, ಸವಣೂರ ತಾಲೂಕಿನಲ್ಲಿ 10 ಹಾಗೂ ಇತರೆ 4 ಜನರು ಸೇರಿ ಒಟ್ಟು 148 ಜನರು ಗುಣವಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 15,453 ಪ್ರಕರಣ ದೃಢಪಟ್ಟಿದ್ದು, ಇದರಲ್ಲಿ 13,387 ಜನ ಗುಣವಾಗಿದ್ದಾರೆ. ಇದುವರೆಗೆ 290 ಜನರು
ಸಸಕೋವಿಡ್ಗೆ ಬಲಿಯಾಗಿದ್ದಾರೆ. ಸದ್ಯ 1,776 ಸಕ್ರಿಯ ಪ್ರಕರಣಗಳಿದ್ದು, 961 ಜನರು ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. 815 ಜನರು
ಹೋಂ ಐಸೋಲೇಷನ್ನಲ್ಲಿದ್ದಾರೆ.
ಐವರ ಸಾವು: ಹಾವೇರಿ ತಾಲೂಕಿನ 54 ವರ್ಷದ ಮಹಿಳೆ, ಶಿಗ್ಗಾಂವಿ ತಾಲೂಕಿನ 58 ವರ್ಷದ ಮಹಿಳೆ, ಹಿರೇಕೆರೂರ 60 ವರ್ಷದ ವೃದ್ಧೆ, ಸವಣೂರ ತಾಲೂಕಿನ 92 ವರ್ಷದ ವೃದ್ಧೆ, ಹಾನಗಲ್ಲ ತಾಲೂಕಿನ 67 ವರ್ಷದ ವೃದ್ಧೆ ಸೇರಿ ಒಟ್ಟು ಐವರು ಕೋವಿಡ್ನಿಂದ ಮೃತಪಟ್ಟಿದ್ದಾರೆ.