ಮದ್ದೂರು: ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಅಮೇಚೂರ್ ಥ್ರೋ ಬಾಲ್ ಅಸೋಸಿಯೇಷನ್ ಆಫ್ ಮಂಡ್ಯ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಪುರುಷ ಮತ್ತು ಮಹಿಳೆಯರ ಥ್ರೋ ಬಾಲ್ ಪಂದ್ಯಾವಳಿ ಭಾನುವಾರ ಯಶಸ್ವಿಯಾಗಿ ನಡೆಯಿತು.
ಥ್ರೋ ಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅಸೋಸಿಯೇಷನ್‌ನ ಜಿಲ್ಲಾಧ್ಯಕ್ಷ ಚೆನ್ನಸಂದ್ರ ಲಕ್ಷ್ಮಣ್, ಮೈಸೂರು, ಬೆಂಗಳೂರು, ಮಾಲೂರು, ತುಮಕೂರು, ಹುಬ್ಬಳ್ಳಿ, ಚಿತ್ರದುರ್ಗ, ಕನಕಪುರ, ಚಾಮರಾಜನಗರ, ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳಿಂದ 16 ಪುರುಷ , 14 ಮಹಿಳ ತಂಡ ಸೇರಿದಂತೆ ಒಟ್ಟಾರೆಯಾಗಿ 450 ಕ್ಕೂ ಹೆಚ್ಚು ಕ್ರೀಡಾ ಸ್ಪರ್ಧಿಗಳು ಭಾಗವಹಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಅಸೋಸಿಯೇಷನ್ ಜಿಲ್ಲಾ ಗೌರವಾಧ್ಯಕ್ಷ ಗೊರವನಹಳ್ಳಿ ರಾಘವ, ರಾಷ್ಟ್ರೀಯ ಥ್ರೋ ಬಾಲ್ ಆಟಗಾರರಾದ ರಾಮಲಾಲ್, ಸುಹಾಸ್, ಕಾರ್ತಿಕ್ ಹಾಗೂ ನಿಖಿಲ್ ಇದ್ದರು.