ಅರಕಲಗೂಡು ತಾಲೂಕಿನ ಬಸವಾಪಟ್ಟಣದ ಹಳೇ ಸಂತೆಮಾಳ ರಸ್ತೆಯಲ್ಲಿ ವಿನಾಯಕ ಗೆಳಯರ ಬಳಗದ ವತಿಯಿಂದ ಪ್ರತಿಷ್ಠಾಪಿಸಿರುವ ಗಣೇಶೋತ್ಸವದ ಪ್ರಯುಕ್ತ ಬುಧವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಯುವಕರು ರಕ್ತದಾನ ಮಾಡಿದರು. 
ಜಿಲ್ಲೆ

45 ಜನರಿಂದ ರಕ್ತದಾನ

Hassan

ಅರಕಲಗೂಡು: ತಾಲೂಕಿನ ಬಸವಾಪಟ್ಟಣದ ಹಳೇ ಸಂತೆಮಾಳ ರಸ್ತೆಯಲ್ಲಿ ವಿನಾಯಕ ಗೆಳೆಯರ ಬಳಗದ ವತಿಯಿಂದ ಪ್ರತಿಷ್ಠಾಪಿಸಿರುವ ಗಣೇಶೋತ್ಸವದ ಪ್ರಯುಕ್ತ ಬುಧವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ 45 ಜನರು ರಕ್ತದಾನ ಮಾಡಿದರು.

ಜಿಲ್ಲಾ ವೈದ್ಯಕೀಯ ಮಹಾವಿದ್ಯಾಲಯ, ಜಯಚಾಮರಾಜೇಂದ್ರ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ವೈದ್ಯರಾದ ಡಾ. ನಾಗಲಕ್ಷ್ಮೀ, ಸಿ.ಎಸ್.ಶಿವಸ್ವಾಮಿ, ಮಹೇಶ್‌ಕುಮಾರ್, ಅರವಿಂದ, ಗಾಯತ್ರಿ, ಆಶಾ, ಬಸವಯ್ಯ, ಸಂತೋಷ್ ಕುಮಾರ್, ರೂಪೇಶ್ ಮತ್ತು ಸಿಬ್ಬಂದಿ ಸಹಕರಿಸಿದರು.