ಹುಬ್ಬಳ್ಳಿ: ಕೆನರಾ ಬ್ಯಾಂಕ್ ಸಂಸ್ಥಾಪಕ ದಿ. ಅಮ್ಮೆಂಬಳ ಸುಬ್ಬರಾವ್ ಪೈ ಜನ್ಮದಿನ ನಿಮಿತ್ತ ಕೆನರಾ ಬ್ಯಾಂಕ್, ರೋಟರಿ ಕ್ಲಬ್, ನವನಗರ ಕರ್ನಾಟಕ ಕ್ಯಾನ್ಸರ್ ಚಿಕಿತ್ಸೆ ಮತ್ತು ಸಂಶೋಧನಾ ಸಂಸ್ಥೆ, ಕೆಎಂಸಿಆರ್‌ಐ, ಕೆನರಾ ಬ್ಯಾಂಕ್ ವೃತ್ತ ಕಚೇರಿ ಸಹಯೋಗದಲ್ಲಿ ನಗರದ ಗೋಕುಲ ರಸ್ತೆಯ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯಲ್ಲಿ ಮಂಗಳವಾರ ರಕ್ತದಾನ ಶಿಬಿರ ಮತ್ತು ಅಂಗಾಂಗ ದಾನ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಡೆಪ್ಯೂಟಿ ಜೆನರಲ್ ಮ್ಯಾನೇಜರ್‌ಗಳಾದ ಜೆ.ಪಿ. ಪಾಣಿಗ್ರಾಹಿ, ಎಲ್.ಆರ್. ವಿಜಯಶ್ರೀ ರಕ್ತ ದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 45ಯೂನಿಟ್ ರಕ್ತವು ಸಂಗ್ರಹವಾಯಿತು.
ರೋಟರಿ ಕ್ಲಬ್ ಹುಬ್ಬಳ್ಳಿ ಅಧ್ಯಕ್ಷ ಬಾಪು ಬಿರಾದಾರ, ಕಾರ್ಯದರ್ಶಿ ಎ.ವಿ. ಸಂಕನೂರ, ಮಂಜುನಾಥ ಹೊಂಬಳ, ಜನರಲ್ ಮ್ಯಾನೇಜರ್‌ಗಳಾದ ರಂಜಿತ್ ಜೆನಾ, ಸಂದೀಪ್ ಅಗರ್ವಾಲ್, ನರೇಶ್‌ಕುಮಾರ್, ಬ್ಯಾಂಕ್ ಸಿಬ್ಬಂದಿ ರಾಜಶೇಖರ್ ಎ.ವಿ., ಡಿ.ಎಂ. ಅಸೋಸಿಯೇಷನ್ ಉದಯ್ ಮಹಾಲೆ, ಸಿಬಿಒಎ ಸರ್ಕಲ್ ಲಿಸನ್ ಸಂಜೀವ್ ಕುಲಕರ್ಣಿ ಆರ್.ಎಸ್., ಗಿರೀಶ್ ಬಾಳಗಿ, ಶ್ರೀಹರಿ ಬಿ.ಎಸ್, ಸೌಜನ್ಯ ಕೆ., ದೀಪಾ ಕೊಟ್ರನ್ನವರ್, ನವೀನ ಓದುಗೌಡರ್, ಡಾ. ಉಮೇಶ ಹಳ್ಳೀಕೇರಿ, ಮಹಾಂತೇಶ ವೀರಾಪುರ ಉಪಸ್ಥಿತರಿದ್ದರು.