ಹುಬ್ಬಳ್ಳಿ : ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ನೈಋತ್ಯ ರೈಲ್ವೆ ವಲಯ ಪ್ರಾರಂಭಿಸಿದ ವಿಶೇಷ 20 ಟ್ರಿಪ್ ರೈಲುಗಳಲ್ಲಿ 45,568 ಹೆಚ್ಚು ಭಕ್ತರು (2024ರ ಡಿಸೆಂಬರ್ 26 ರಿಂದ ಇದೇ ೆಬ್ರವರಿ 24ರವರೆಗೆ ಮಾಡಿದ ರಿಸರ್ವೆಶನ್) ಪ್ರಯಾಣಿಸಿದ್ದಾರೆ.
ನೈಋತ್ಯ ರೈಲ್ವೆಯ ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರು ವಿಭಾಗಗಳಿಂದ 20 ಟ್ರಿಪ್ ರೈಲುಗಳು ಒಟ್ಟು 41,306 ಪ್ರಯಾಣಿಕರನ್ನು ಸಾಗಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ. ಈ ವಿಶೇಷ ಟ್ರಿಪ್ ಗಳಿಂದ ರೈಲ್ವೆ 4,95,14,078 ರೂಪಾಯಿಗಳ ಆದಾಯ ಗಳಿಸಿದೆ.
ಮಹಾಕುಂಭಮೇಳಕ್ಕಾಗಿ ಸಂಚಾರ ಪ್ರಾರಂಭಿಸಿದ ವಿಶೇಷ ರೈಲುಗಳು ಅತಿ ಹೆಚ್ಚು ಜನಪ್ರಿಯವಾಗಿದ್ದು, ಸರಾಸರಿ ಶೇ. 143.8 ರಷ್ಟು ಸೀಟ್ಗಳ ಭತಿರ್ಯೊಂದಿಗೆ ರೈಲುಗಳು ಸಂಚರಿಸುತ್ತಿವೆ.
ಮಹಾಕುಂಭಮೇಳಕ್ಕೆ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ ಭಕ್ತರಿಗೆ ನೈಋತ್ಯ ರೈಲ್ವೆ ವಲಯವು ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಮಹಾಕುಂಭಮೇಳದ ಮಾರ್ಗಸೂಚಿಗಳನ್ನು ಒಳಗೊಂಡ ಕಿರುಪುಸ್ತಕಗಳನ್ನು ಸಹ ಒದಗಿಸಿದೆ.
ಪ್ರಯಾಣಿಕರ ಬೇಡಿಕೆಗಳಿಗೆ ಅನುಸಾರವಾಗಿ ನೈಋತ್ಯ ರೈಲ್ವೆ ವಲಯವು ಹುಬ್ಬಳ್ಳಿ, ಬೆಂಗಳೂರು, ಮೈಸೂರು ವಿಭಾಗಗಳಿಂದ ವಿಶೇಷ ರೈಲುಗಳನ್ನು ಸಂಚರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವಿಶೇಷ ರೈಲುಗಳನ್ನು ಕುಂಭಮೇಳದ ಭಕ್ತರಿಗೆ ಒದಗಿಸುವ ನಿರೀೆ ಇದೆ.
ಕುಂಭಮೇಳಕ್ಕೆ ಹೋಗಬೇಕೆನ್ನುವ ಭಕ್ತರಿಗೆ ನೈಋತ್ಯ ರೈಲ್ವೆಯ ವಿಶೇಷ ರೈಲುಗಳ ಸಂಚಾರ ಸಾಕಷ್ಟು ಸಹಾಯ ಮಾಡಿದೆ.