ಜಿಲ್ಲೆ

ಜಿಲ್ಲೆಯಲ್ಲಿ 45 ಮಂದಿ ಕರೊನಾ ಸೋಂಕಿತರು ಗುಣಮುಖ

Tumakuru

ತುಮಕೂರು/ಚಿಕ್ಕನಾಯಕನಹಳ್ಳಿ: ಜಿಲ್ಲೆಯಲ್ಲಿ ಕರೊನಾ ಆರ್ಭಟ ಸ್ವಲ್ಪಮಟ್ಟಿಗೆ ತಗ್ಗಿದೆ. ಹೊಸದಾಗಿ 18 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 630ಕ್ಕೇರಿದೆ. ಶುಕ್ರವಾರ ಒಂದೇ ದಿನ 45 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವುದು ಸಮಾಧಾನದ ಸಂಗತಿ.

ತುಮಕೂರು ತಾಲೂಕಿನಲ್ಲಿ 7, ಚಿಕ್ಕನಾಯಕನಹಳ್ಳಿ 5, ಕುಣಿಗಲ್ 3 ಹಾಗೂ ತಿಪಟೂರು, ತುರುವೇಕರೆ, ಗುಬ್ಬಿ ತಾಲೂಕಿನಲ್ಲಿ ಒಬ್ಬರಿಗೆ ಸೋಂಕು ತಗುಲಿದೆ. ಜಿಲ್ಲಾಸ್ಪತ್ರೆಯಿಂದ ಶುಕ್ರವಾರ 45 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 267 ಮಂದಿ ಸಂಪೂರ್ಣವಾಗಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 345 ಸಕ್ರಿಯ ಪ್ರಕರಣಗಳಿದ್ದು ಈವರೆಗೆ 18 ಮಂದಿ ಕರೊನಾಕ್ಕೆ ಬಲಿಯಾಗಿದ್ದಾರೆ.

ಎಎಸ್‌ಐಗೆ ಸೋಂಕು!: ಚಿಕ್ಕನಾಯಕನ ಹಳ್ಳಿ ತಾಲೂಕಿ ನಲ್ಲಿ ಐವರಿಗೆ ಸೋಂಕು ದೃಢವಾಗಿದೆ. ಚಿಕ್ಕನಾಯಕನಹಳ್ಳಿ ಠಾಣೆಯ 55 ವರ್ಷದ ಎಎಸ್‌ಐಗೆ ಸೋಂಕು ಕಾಣಿಸಿರುವ ಹಿನ್ನೆಲೆಯಲ್ಲಿ ಠಾಣೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಪಟ್ಟಣದ ಬೇಕರಿ ಮಾಲೀಕ, ಬ್ರಾಹ್ಮಣರ ಬೀದಿ ನಿವಾಸಿ 30 ವರ್ಷದ ವ್ಯಕ್ತಿ, ಪಟ್ಟಣದ 28ವರ್ಷದ ಯುವಕ, ಕಾಡೇನಹಳ್ಳಿಯ 38 ವರ್ಷದ ಮಹಿಳೆ, ಅರಸೀಕೆರೆ ಗಾರ್ಮೆಂಟ್ಸ್‌ಗೆ ಕೆಲಸಕ್ಕೆ ಹೋಗುತ್ತಿದ್ದ 22 ವರ್ಷದ ಹಂದನಕೆರೆ ಯುವತಿಗೂ ಸೋಂಕು ತಗುಲಿದೆ.

ಅಂತ್ಯಸಂಸ್ಕಾರಕ್ಕೆ ಜಾಗ ಗುರುತಿಸಿ : ಈಗಾಗಲೇ ರಾಜ್ಯಸರ್ಕಾರ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕೋವಿಡ್-19 ತಡೆಗಟ್ಟುವ ಹಾಗೂ ಇದರಿಂದಾಗುವ ದುಷ್ಪರಿಣಾಮಗಳನ್ನು ನಿಯಂತ್ರಿಸುವ ಹೊಣೆ ನೀಡಿದೆ. ನಗರ ಸೇರಿ ತುಮಕೂರು ತಾಲೂಕಿನಲ್ಲಿ ಮೃತಪಡುತ್ತಿರುವ ಸಂಖ್ಯೆ ಹೆಚ್ಚಳವಾಗುತ್ತಿದ್ದು, ನರದಲ್ಲಿ ಎಲ್ಲ ಧರ್ಮಿಯರು ವಾಸವಿದ್ದು ಹತ್ತಿರವಾದ ಸೂಕ್ತ ಸ್ಥಳ ಗುರುತಿಸಿ ಸೋಂಕಿತ ಮೃತರ ಅಂತಿಮ ಸಂಸ್ಕಾರ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮಾಜಿ ಶಾಸಕ ಡಾ.ಕೆ.ರಫೀಕ್ ಅಹ್ಮದ್ ಮನವಿ ಮಾಡಿದ್ದಾರೆ.