ಜಿಲ್ಲೆ

44 ಗ್ರಾಂ ಚಿನ್ನಾಭರಣ ಕಳವು

ರಮೇಶ ಮೇಳಕುಂದಾ

ಕಲಬುರಗಿ: ಇಸ್ಲಾಮಾಬಾದ್ ಕಾಲನಿ ಮನೆಯೊಂದರಲ್ಲಿ ಗುರುವಾರ ಮಾಲೀಕರು ಮದುವೆಗೆ ಹೋದಾಗ ಕಳ್ಳತನ ನಡೆದಿದೆ. ಮಹ್ಮದ್ ಯುನೂಸ್ ಮನೆಯಲ್ಲಿದ್ದ 2.2 ಲಕ್ಷ ಮೌಲ್ಯದ ೪೪ ಗ್ರಾಂ ಚಿನ್ನಾಭರಣ ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಮಹ್ಮದ್ ಯುನೂಸ್ ಸಂಜೆ ಕುಟುಂಬಸಮೇತ ಮದುವೆಗೆ ಹೋಗಿ ಬರುವಷ್ಟರಲ್ಲಿ ಕಳ್ಳತನವಾಗಿದೆ. ರೋಜಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.