ಸವದತ್ತಿ ಬಸ್ ನಿಲ್ದಾಣದಲ್ಲಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಗೆ ಶಿಬಿರಾರ್ಥಿಗಳನ್ನು ಬೀಳ್ಕೊಡಲಾಯಿತು. ಸಂಜೀವಕುಮಾರ ನವಲಗುಂದ, ಶ್ರೀಧರ ಆಸಂಗಿಹಾಳ, ಶಿವಲಿಂಗಪ್ಪ ನವಲಗುಂದ, ಸುನೀಲ ಸುಳ್ಳದ ಇತರರಿದ್ದರು. 
ಜಿಲ್ಲೆ

42 ರೋಗಿಗಳಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ

Belagavi

ಸವದತ್ತಿ: ಸಾರ್ವಜನಿಕರು ಆರೋಗ್ಯ ಸುಸ್ಥಿರವಾಗಿಟ್ಟು ಕೊಳ್ಳಬೇಕೆಂಬ ಸದುದ್ದೇಶದಿಂದ ಆರೋಗ್ಯ ಉಚಿತ ತಪಾಸಣೆ ಶಿಬಿರ ನಡೆಸಲಾಗಿದೆ. ಬರುವ ದಿನಗಳಲ್ಲಿ ಸಮಾಜದ ಏಳಿಗೆ ಹಾಗೂ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲಾಗುವುದು ಎಂದು ಬಿಜೆಪಿ ಮುಖಂಡ ಸಂಜೀವಕುಮಾರ ನವಲಗುಂದ ಹೇಳಿದರು.

ಇಲ್ಲಿನ ಬಸ್ ನಿಲ್ದಾಣದಲ್ಲಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಗೆ ಶಿಬಿರಾರ್ಥಿಗಳನ್ನು ಬೀಳ್ಕೊಟ್ಟು ಅವರು ಮಾತನಾಡಿದರು. ರಾಜ್ಯದಲ್ಲೇ ಪ್ರಥಮ ಬಾರಿಗೆ ಇಂಥದೊಂದು ವ್ಯವಸ್ಥೆ ಕಲ್ಪಿಸಲಾಗಿದೆ. ಔಷಧೋಪಚಾರ, ವಸತಿ, ಊಟ ಸೇರಿ ಎಲ್ಲವೂ ಉಚಿತವಾಗಿದೆ. ಹಂತ ಹಂತವಾಗಿ ರೋಗಿಗಳನ್ನು ಚಿಕಿತ್ಸೆಗೆ ಕಳಿಸಲಾಗುವುದು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ನಿಮಿತ್ತ ಉಚಿತ ಆರೋಗ್ಯ ಶಿಬಿರ ನಡೆಸಿದ್ದು ಶಿಬಿರಾರ್ಥಿಗಳ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ತಾಲೂಕಾಸ್ಪತ್ರೆ ಮತ್ತು ಯರಗಟ್ಟಿ ಸಮುದಾಯ ಆಸ್ಪತ್ರೆಯಲ್ಲಿ ಜರುಗಿದ ಆರೋಗ್ಯ ತಪಾಸಣೆ ಶಿಬಿರದಲ್ಲಿ 160ಕ್ಕೂ ಅಧಿಕ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯವಿದೆ. ಮೊದಲ ಹಂತದಲ್ಲಿ ಎರಡು ಬಸ್ ಮೂಲಕ 42 ರೋಗಿಗಳು ಮತ್ತು ಅವರ ಸಂಬಂಧಿಕರನ್ನು ಚಿಕಿತ್ಸೆಗೊಳಪಡಿಸಲು ಕಳುಹಿಸಲಾಗುವುದು ಎಂದರು. ಶ್ರೀಧರ ಆಸಂಗಿಹಾಳ ಮಾತನಾಡಿ, ಸಮಾಜಕ್ಕೆ ಕೊಡುಗೆ ನೀಡಿ ಮಾದರಿ ವ್ಯಕ್ತಿಯಾಗುವ ಬಯಕೆ ಹೊಂದಿದ ಅವರ ಕಾರ್ಯ ಶ್ಲಾಘನೀಯ. ಸಮಾಜಮುಖಿ ಕಾರ್ಯಗಳು ಮುಂದುವರಿಯಲಿ ಎಂದರು. ಶಿವಲಿಂಗಪ್ಪ ನವಲಗುಂದ, ಸುನೀಲ ಸುಳ್ಳದ, ಜಗದೀಶ ಶಿರಸಂಗಿ, ಶಿಬಿರಾರ್ಥಿಗಳಿದ್ದರು.