ಗುಳೇದಗುಡ್ಡ;ಕಳೆದ ಮೂರು ದಿನಗಳಿಂದ ಅಂದಾಜು 40ಕ್ಕೂ ಹೆಚ್ಚು ಜನರನ್ನು ಕಚ್ಚಿ ಗಾಯಗೊಳಿಸಿದ್ದ ಕಪಿರಾಯ ಶುಕ್ರವಾರ ಕೊನೆಗೂ ಸೆರೆ ಸಿಕ್ಕಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಬೋನಿಗೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.ಬುಧವಾರ ಸಂಜೆ ಪಟ್ಟಣದಲ್ಲಿ ಏಕಾಏಕಿ ಸಾರ್ವಜನಿಕರ ಮೇಲೆ ದಾಳಿಮಾಡಿ ಅಂದಾಜು 20ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿತ್ತು, ಸುದ್ದಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದಾಗ ದಾಳಿಕೋರ ಮಂಗನನ್ನು ಹಿಡಿದು ಹಾಕುವಂತೆ ಸಾರ್ವಜನಿಕರು ಒತ್ತಾಯಿಸಿದರು. ಕತ್ತಲೆಯಾಗಿದ್ದರಿಂದ ಬೆಳಗ್ಗೆ ಮಂಗನನ್ನು ಹಿಡಿಯಲು ಕಾರ್ಯಾಚರಣೆ ಆರಂಭಿಸುವುದಾಗಿ ತಿಳಿಸಿದರು.
ಮರುದಿನ ಗುರುವಾರ ಬೆಳಗ್ಗೆಯಿಂದಲೇ ಅರಣ್ಯ ಇಲಾಖೆ ಸಿಬ್ಬಂದಿ ಮಂಗನನ್ನು ಸೆರೆಹಿಡಿಯಲು ಕಾರ್ಯಾಚರಣೆ ಆರಂಭಿಸಿದರು. ಎಷ್ಟೇ ಪ್ರಯತ್ನ ಮಾಡಿದರೂ ಮಂಗ ಬಲೆಗೆ ಬೀಳಲಿಲ್ಲ. ಈ ನಡುವೆ ಮತ್ತೆ 20ಕ್ಕೂ ಹೆಚ್ಚು ಜನರಿಗೆ ಕಚ್ಚಿ ಗಾಯಗೊಳಿಸಿದ್ದರಿಂದ ಸಾರ್ವಜನಿಕರು ಮನೆಯಿಂದ ಆಚೆ ಬರಲು ಭಯ ಪಡುತ್ತಿದ್ದರು.
ಶುಕ್ರವಾರ ಮತ್ತೆ ಬೆಳಗ್ಗೆ ಪತ್ರಿಕಾ ವಿತರಕ ಸೇರಿ ಮೂವರ ಮೇಲೆ ಮತ್ತೆ ದಾಳಿಮಾಡಿ ಗಾಯಗೊಳಿಸಿತ್ತು, ಗದಗ ಜಿಲ್ಲೆಯ ಪ್ರಾಣಿ ಸಂಗ್ರಹಾಲಯದಿಂದ ಆಗಮಿಸಿದ ಡಾ. ಪವಿತ್ರಾ ಜೈನ ಹಾಗೂ ಅರವಳಿಕೆ ತ ನಿಖಿಲ್ ಕುಲಕರ್ಣಿ ಪಟ್ಟಣದ ಸಾಲೇಶ್ವರ ದೇವಸ್ಥಾನದ ಹತ್ತಿರದ ಮರದಲ್ಲಿದ್ದ ಕಪಿರಾಯನನ್ನು ಸೆರೆಹಿಡಿಯಲು ಕಾರ್ಯಾಚರಣೆ ಆರಂಭಿಸಿದರು. ಅತ್ತಿಂದಿತ್ತ ಜಿಗಿದ ಮಂಗನನ್ನು ಹಿಡಿಯಲು ಅರವಳಿಕೆ ಔಷಧಿ ನೀಡಲಾಯಿತು. ಇದರಿಂದ ಪ್ರಜ್ಞೆ ತಪ್ಪಿ ಮಂಗ ಶಾಂತವಾಯಿತು. ನಂತರ ಹಿಡಿದು ಬೋನಿಗೆ ಹಾಕಲಾಯಿತು.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯ ಇಲಾಖೆ ಅಧಿಕಾರಿ ಮಹೇಶ ಮರಿಯನ್ನವರ, ಉಪವಲಯ ಅರಣ್ಯಾಧಿಕಾರಿ ಆರ್.ಎಸ್. ಹೊಸಮನಿ, ಮಹೇಶ ಕಲ್ಲೂರ, ಬಿ.ಎಸ್. ಬಡಿಗೇರ, ಪಿ.ಎಸ್. ತುಂಗಳ, ಬಿ.ಎಸ್. ಮಾಲಗಿತ್ತಿಮಠ, ಶಿವರಾಜ ಸಜ್ಜನ, ಶರಣು ಹಚ್ಚಾಳ, ಬದ್ರು ಸಂಕನ್ನವರ, ನಾಗರಾಜ ಹೊಸಮನಿ, ಹನಮಂತ ತಿಮ್ಮಣ್ಣವರ ಇತರರಿದ್ದರು.
'ಗುಳೇದಗುಡ್ಡದಲ್ಲಿ ಕೋತಿ ದಾಳಿಗೊಳಗಾದ ಪತ್ರಿಕಾ ವಿತರಕ ............