ಜಿಲ್ಲೆ

೪೦೦ ಕೆವಿ ವಿರುದ್ಧ ಮನವಿ

Mangaluru - Nishantha Narayana

ಪುತ್ತೂರು: ಉಡುಪಿ-ಕಾಸರಗೋಡು ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣದಿಂದ ರೈತರಿಗೆ ಸಮಸ್ಯೆಯಾಗುತ್ತಿರುವ ವಿಚಾರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ೪೦೦ ಕೆವಿ ವಿದ್ಯುತ್ ಪ್ರಸರಣ ಮಾರ್ಗ ವಿರೋಽ ಹೋರಾಟ ಸಮಿತಿ ವತಿಯಿಂದ ಪುತ್ತೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಅವರಿಗೆ ಮನವಿ ನೀಡಲಾಯಿತು.

ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಸಣ್ಣ ಹಾಗೂ ಅತಿಸಣ್ಣ ರೈತರು ಹೆಚ್ಚಾಗಿದ್ದು, ವಿದ್ಯುತ್ ಮಾರ್ಗ ರಚನೆಯಿಂದ ಕೃಷಿಕರು ನೆಲೆ ಕಳೆದುಕೊಳ್ಳುವಂತಾಗಿದೆ. ಯೋಜನೆ ಇನ್ನೂ ಪ್ರಾರಂಭ ಹಂತದಲ್ಲಿದ್ದು, ಇಲ್ಲಿಯವರೆಗೆ ಯಾವುದೇ ಟವರ್ ನಿರ್ಮಾಣವಾಗಿಲ್ಲ. ಸದ್ಯ ಬಿಜೆಪಿಯವರು ಕಾಂಗ್ರೆಸ್ ಯೋಜನೆಯನ್ನು ಜಾರಿಗೊಳಿಸುತ್ತಿರುವುದೆಂದು ಹೇಳಿಕೆ ನೀಡಿದ್ದಾರೆ. ನ್ಯಾಯಾಲಯಗಳೂ ರೈತರಿಗೆ ಸಮಸ್ಯೆಯಾಗದ ರೀತಿಯಲ್ಲಿ ತೆಗೆದುಕೊಂಡು ಹೋಗಬೇಕೆಂಬ ಆದೇಶಗಳನ್ನು ಮಾಡಿದ್ದು ಇದನ್ನು ಪಾಲಿಸಬೇಕು. ಈ ಕಾರಣದಿಂದ ಸಮುದ್ರದ ಬದಿಯಲ್ಲಿ ಅಥವಾ ಹೆದ್ದಾರಿ ಬದಿಯಲ್ಲಿ ಭೂಗತವಾಗಿ ತೆಗೆದುಕೊಂಡು ಹೋಗಲು ಕ್ರಮಕೈಗೊಳ್ಳಬೇಕು. ಸೂಕ್ತ ತೀರ್ಮಾನ ಆಗುವ ತನಕ ಯಾವುದೇ ಪ್ರದೇಶದಲ್ಲೂ ಕೆಲಸ ನಡೆಸದಂತೆ ಜಿಲ್ಲಾಽಕಾರಿಗಳಿಗೆ ಸೂಚನೆ ನೀಡಬೇಕೆಂದು ಆಗ್ರಹಿಸಿದರು.

೪೦೦ ಕೆವಿ ವಿದ್ಯುತ್ ಪ್ರಸರಣ ಮಾರ್ಗ ವಿರೋಽ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ, ಕಾರ್ಯದರ್ಶಿ ರೋಹಿತಾಕ್ಷ ಬಂಗ, ಸಂತ್ರಸ್ತರಾದ ಹರೀಶ್ ನಾಯ್ಕ, ರಾಬರ್ಟ್ ಬೆಂಜತಿಮಾರು ಮತ್ತಿತರರು ಉಪಸ್ಥಿತರಿದ್ದರು.