ರಾಜ್ಯಮಟ್ಟದ  
ಜಿಲ್ಲೆ

ರಾಜ್ಯಮಟ್ಟದ ಉಪನ್ಯಾಸದಲ್ಲಿ 400 ವೈದ್ಯರು ಭಾಗಿ

ಗಿರೀಶ ಸಗರ

ವಿಜಯಪುರ: ದಿ. ಡಾ. ಸಿ. ಆರ್​. ಬಿದರಿ ಸ್ಮರಣಾರ್ಥ ಕ್ಯಾನ್ಸರ್​ ಕುರಿತು ಮುಂದುವರಿದ ವೈದ್ಯಕಿಯ ಶಿಣ ರಾಜ್ಯ ಮಟ್ಟದ ಉಪನ್ಯಾಸ ಕಾರ್ಯಕ್ರಮ ನಗರದ ಬಿಎಲ್​ಡಿಇ ಡೀಮ್ಡ್​ ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆಯಿತು.

ಬಿಎಲ್​ಡಿಇ ಡೀಮ್ಡ್​ ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ವೈದ್ಯಕಿಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ವೈದ್ಯಕಿಯ ಶಾಸ ವಿಭಾಗಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಸಿಕಂದರಾಬಾದಿನ ರೇನೋವಾ ಸೌಮ್ಯ ಕ್ಯಾನ್ಸರ್​ ಸೆಂಟರ್​ನ ಮೆಡಿಕಲ್​ ಅಂಕೋಲಾಜಿ ವಿಭಾಗದ ನಿರ್ದೇಶಕ, ಮುಖ್ಯಸ್ಥ ಡಾ. ಪಿ.ಎಸ್​. ದತ್ತಾತ್ರೇಯ ಉದ್ಘಾಟಿಸಿದರು. ಡಾ. ಆರ್​.ಎಸ್​. ಮುಧೋಳ ಅಧ್ಯತೆ ವಹಿಸಿದ್ದರು. ವೈದ್ಯಕಿಯ ಶಾಸ ವಿಭಾಗದ ಪೊ. ಡಾ. ಆರ್​.ಸಿ. ಬಿದರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಾ. ಸಿ. ಆರ್​. ಬಿದರಿ ಸ್ಮಾರಕ ದತ್ತಿ ವತಿಯಿಂದ ನಡೆದ ಉಪನ್ಯಾಸದಲ್ಲಿ ಮುಂಬಯಿ ಮತ್ತು ಹೈದರಾಬಾದ್​ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ 400 ಪ್ರತಿನಿಧಿಗಳು ಭಾಗವಹಿಸಿದ್ದರು. 1300 ಜನ ಕಾರ್ಯಕ್ರಮಕ್ಕೆ ಆನ್​ಲೈನ್​ ನೋಂದಣಿ ಮಾಡಿದ್ದರು.

ವಿಜಯೇಂದ್ರ ಬಿದರಿ, ಡಾ. ಆರ್​.ಸಿ. ಬಿದರಿ, ಆಶಾ ಎಂ. ಪಾಟೀಲ, ಡಾ. ಶೈಲಜಾ ಬಿದರಿ, ಆಸ್ಪತ್ರೆ ವೈದ್ಯಕಿಯ ಅಧೀಕ ಡಾ. ರಾಜೇಶ ಹೊನ್ನುಟಗಿ, ಆಸ್ಪತ್ರೆ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ಕಾಲೇಜಿನ ಉಪಪ್ರಾಚಾರ್ಯ ಡಾ. ಎಂ.ಬಿ. ಪಾಟೀಲ, ವೈದ್ಯಕಿಯ ಶಾಸ ವಿಭಾಗದ ಮುಖ್ಯಸ್ಥ ಡಾ. ಎಸ್​.ಎನ್​. ಬೆಂಟೂರ, ಡಾ. ತೇಜಸ್ವಿನಿ ಮತ್ತಿತರರಿದ್ದರು.

ಡೀಮ್ಡ್​ ವಿವಿ ಸಮ ಕುಲಾಧಿಪತಿ ಡಾ. ವೈ.ಎಂ. ಜಯರಾಜ್​ ಸ್ವಾಗತಿಸಿದರು. ಕುಲಪತಿ ರಿಜಿಸ್ಟ್ರಾರ್​ ಡಾ. ಆರ್​.ವಿ. ಕುಲಕರ್ಣಿ ವಂದಿಸಿದರು.