ಕಲಬುರಗಿ: ಭರತ್ ನಗರ ತಾಂಡಾದಲ್ಲಿ ಮನೆ ಎದುರು ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಗುರುವಾರ ಬಂಧಿಸಿ, ಬಂಧಿತರಿಂದ 40 ಲೀಟರ್ ಕಳ್ಳಭಟ್ಟಿ ಸರಾಯಿ ಜಪ್ತಿ ಮಾಡಿಕೊಳ್ಳಲಾಗಿದೆ. ವಿನೋದ ಆರ್. (೩೧), ಶಾರದಾಬಾಯಿ ಆರ್.(೪೬), ಜೈನಾಬಾಯಿ ಆರ್.(೫೫) ಬಂಧಿತರು. ಪಿಐ ಅರುಣಕುಮಾರ, ಪಿಎಸ್‌ಐ ಯಶೋಧಾ ಕಟಕೆ, ಸುಭಾಷಚಂದ್ರ, ಸಿಬ್ಬಂದಿ ನವೀನಕುಮಾರ, ವಿಜ್ಜುಬಾಯಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.