ಜಿಲ್ಲೆ

ಪಿಎಲ್​ಡಿ ಬ್ಯಾಂಕ್ ಚುನಾವಣೆಗೆ 40 ನಾಮಪತ್ರ ಸಲ್ಲಿಕೆ

ಬ್ಯಾಡಗಿ: ತಾಲೂಕು ಪ್ರಾಥಮಿಕ ಸಹಕಾರಿ ಸಂಘ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕರ ಆಯ್ಕೆ ಚುನಾವಣೆಗೆ ಡಿ. 27ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಜ. 3 ಕೊನೆಯ ದಿನವಾಗಿದೆ. ಈವರೆಗೂ ಒಟ್ಟು 40 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣೆ ಅಧಿಕಾರಿ ಜಿ.ಬಿ. ಲೋಕೇಶ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ಡಿ. 27ರಿಂದ ಜ. 2ರ ವರೆಗೆ 19 ನಾಮಪತ್ರ ಸಲ್ಲಿಕೆಯಾಗಿದೆ. ಕೊನೆಯ ದಿನ ಜ. 3 ರಂದು 21 ಅರ್ಜಿಗಳು ಸಲ್ಲಿಕೆಯಾಗಿದ್ದು, ಈಗ ಒಟ್ಟು 40 ಜನ ಅಭ್ಯರ್ಥಿಗಳು 14 ಕ್ಷೇತ್ರಗಳಿಗೆ ಸ್ಪರ್ಧಿಸಬೇಕಿದೆ. ಸಾಲಗಾರ ಕ್ಷೇತ್ರದ ಮತದಾರರು 738, ಬಿನ್ ಸಾಲಗಾರ ಕ್ಷೇತ್ರದಲ್ಲಿ 141 ಮತದಾರರಿದ್ದಾರೆ. ಅರ್ಜಿಗಳ ಪರಿಶೀಲನೆ ಬಳಿಕ ಜ. 6ರಂದು ಅಭ್ಯರ್ಥಿಗಳ ಪಟ್ಟಿ ಹಾಗೂ ಚುನಾವಣೆ ಚಿಹ್ನೆಗಳನ್ನು ಪ್ರಕಟಿಸಲಾಗುವುದು. ಜ. 11ರಂದು ಚುನಾವಣೆ ಹಾಗೂ ಫಲಿತಾಂಶ ಪ್ರಕಟಣೆ ಆಗಲಿದೆ ಎಂದರು.

14 ಕ್ಷೇತ್ರಗಳ ಆಡಳಿತ ಮಂಡಳಿ ನಿದೇಶಕರ ಆಯ್ಕೆ ಚುನಾವಣೆಯಲ್ಲಿ ಬ್ಯಾಡಗಿ ಸಾಲಗಾರ ಕ್ಷೇತ್ರದಿಂದ ಅಭ್ಯರ್ಥಿ ವಿಜಯ ಮಾಳಗಿ ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯಾಗಿದೆ.</p>