ಮುಳುಬಾಗಿಲು ಗ್ರಾಮದಲ್ಲಿ ಭತ್ತದ ಗದ್ದೆ ನೀರಿಲ್ಲದೆ ಒಣಗಿರುವುದು. 
ಜಿಲ್ಲೆ

ತೀರ್ಥಹಳ್ಳಿಯಲ್ಲಿ ಶೇ.40 ಮಳೆ ಕೊರತೆ

Shivamogga - Desk - Megha MS

ತೀರ್ಥಹಳ್ಳಿ: ತಾಲೂಕಿನಲ್ಲಿ ಈವರೆಗೆ ಶೇ.40 ಮಳೆ ಕೊರತೆ ಎದುರಾಗಿದೆ. ಇದರಿಂದ ಪ್ರಮುಖವಾಗಿ ಭತ್ತದ ಬೆಳೆಗೆ ತಾಲೂಕಿನಾದ್ಯಂತ ನೀರಿನ ಕೊರತೆ ಉಂಟಾಗಿದ್ದು ಗದ್ದೆಗಳು ಒಣಗುತ್ತಿವೆ. ಮಳೆ ಕೊರತೆಯಿಂದಾಗಿ ಕೆಲವೆಡೆ ಕೊಳವೆ ಬಾವಿಗಳಿಂದ ಗದ್ದೆಗಳಿಗೆ ನೀರು ಹಾಯಿಸಲಾಗುತ್ತಿದೆ. ಸೆಪ್ಟೆಂಬರ್ ಎರಡನೇ ವಾರದವರೆಗೆ ವಾಡಿಕೆಗಿಂತ 1,500 ಮಿ.ಮೀ ಮಳೆ ಕೊರತೆಯಾಗಿದೆ. ಹಳ್ಳಕೊಳ್ಳಗಳು ಸೇರಿ ನೀರಿನಾಶ್ರಯ ಇರುವ ಪ್ರದೇಶದಲ್ಲಿ ಪ್ರಸ್ತುತ ಸಮಸ್ಯೆ ಅಷ್ಟೊಂದು ಗಂಭೀರವಾಗಿಲ್ಲ. ಕಳೆದ ವಾರದಿಂದ ಒಂದಿಷ್ಟು ಮಳೆಯಾಗುತ್ತಿದ್ದು ಸಮಸ್ಯೆಯ ಭೀಕರತೆಯನ್ನು ತಾತ್ಕಾಲಿಕವಾಗಿ ತಗ್ಗಿಸಿದೆ.
ಕಳೆದ ಕೆಲ ದಿನಗಳಿಂದ ತಾಲೂಕಿನಲ್ಲಿ ಮಳೆಯಾಗುತ್ತಿರುವುದರಿಂದ ಆತಂಕ ತುಸು ಕಡಿಮೆಯಾಗಿದೆ. ಸಮೀಕ್ಷೆಯಂತೆ ಮಳೆ ಇದೇ ರೀತಿ ಮುಂದುವರಿದಲ್ಲಿ ಒಂದೆರಡು ತಿಂಗಳಲ್ಲಿ ನೀರಿನ ನಿರ್ವಹಣೆ ಸುಧಾರಿಸಲಿದೆ. ಡಿಸೆಂಬರ್ ನಂತರದ ದಿನಗಳು ಕಠಿಣ ಎನಿಸುತ್ತಿದೆ ಎನ್ನುತ್ತಾರೆ ತಾಪಂ ಕಾರ್ಯನಿರ್ವಹಣಾಽಕಾರಿ ಎಂ.ಶೈಲಾ.