ಬೆಂಗಳೂರು: ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಕಬ್ಬನ್ ಪಾರ್ಕ್ನ್ನು ಅಭಿವೃದ್ಧಿಪಡಿಸಲು 40 ಕೋಟಿ ರೂ. ವೆಚ್ಚದ ಎರಡು ಹಂತಗಳ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಸರ್ಕಾರ ನಿರ್ಧರಿಸಿದೆ.
ಬಿಬಿಎಂಪಿ, ಬೆಂಗಳೂರು ಸ್ಮಾರ್ಟ್ ಸಿಟಿ ಲಿ. ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಕಬ್ಬನ್ ಉದ್ಯಾನವನ ಅಭಿವೃದ್ಧಿ ಬಗ್ಗೆ ಕಬ್ಬನ್ಪಾರ್ಕ್ನ ಬ್ಯಾಂಡ್ಸ್ಟಾ್ಯಂಡ್ನಲ್ಲಿ ಭಾನುವಾರ ಸಾರ್ವಜನಿಕರು ಹಾಗೂ ವಾಯುವಿಹಾರಿಗಳ ಜತೆ ಸಭೆ ನಡೆಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಕಬ್ಬನ್ಪಾರ್ಕ್ ಅಭಿವೃದ್ಧಿಗೊಳಿಸಲು 2 ಹಂತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಈಗಾಗಲೇ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಿ ವಾಸ್ತುಶಿಲ್ಪಿಗಳ ಮೂಲಕ ನೀಲಿನಕ್ಷೆ ಸಿದ್ಧಪಡಿಸಿಲಾಗಿದೆ. ಪರಿಸರಸ್ನೇಹಿಯಾಗಿ ಮುಂದಿನ ಮಾರ್ಚ್ ಅಂತ್ಯದೊಳಗಾಗಿ ಮೊದಲನೇ ಹಂತ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಬೆಂಗಳೂರು ಸ್ಮಾರ್ಟ್ ಸಿಟಿ ಲಿ.ನ ಎಂಡಿ ಹೆಪ್ಸಿಬಾ ರಾಣಿ ಕೊರ್ಲಪಾರ್ಟಿ ಮಾಹಿತಿ ನೀಡಿದರು.
ಸಾರ್ವಜನಿಕರ ಅಭಿಪ್ರಾಯಕ್ಕ ಮನ್ನಣೆ: ಕಬ್ಬನ್ ಉದ್ಯಾನವನ್ನು ಮತ್ತಷ್ಟು ಸೌಂದರ್ಯೀಕರಣಗೊಳಿಸಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಸ್ಮಾರ್ಟ್ಸಿಟಿ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಗೊಳ್ಳಲಾಗುತ್ತಿದೆ. ಇಲ್ಲಿಗೆ ಭೇಟಿ ನೀಡುವುದರಿಂದ ಉದ್ಯಾನದಲ್ಲಿನ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಅರಿವಿರುತ್ತದೆ. ಹಾಗಾಗಿ ಅವರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಅಭಿವೃದ್ಧಿ ಯೋಜನೆಯಲ್ಲಿ ಅವರ ಸಲಹೆಗಳನ್ನು ಪೂರಕವಾಗಿ ಅಳವಡಿಸಿಕೊಳ್ಳಲಾಗುವುದು ಎಂದು ಮೇಯರ್ ಗೌತಮ್ಕುಮಾರ್ ತಿಳಿಸಿದರು. ಸ್ಮಾರ್ಟ್ಸಿಟಿಯಡಿ ಕೈಗೆತ್ತಿಕೊಳ್ಳುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು.
ಸಭೆಯಲ್ಲಿ ತೋಟಗಾರಿಕಾ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ, ಸಂಸದ ಪಿ.ಸಿ.ಮೋಹನ್, ಶಾಸಕ ರಿಜ್ವಾನ್ ಹರ್ಷದ್, ಪಾಲಿಕೆ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಸಿ.ಸಿ. ಕ್ಯಾಮರಾ ಅಳವಡಿಕೆ, ರ್ಪಾಂಗ್ ಸ್ಥಳಗಳ ನಿರ್ವಣ, ಕುಡಿಯುವ ನೀರಿನ ವ್ಯವಸ್ಥೆ, ಶೌಚಗೃಹಗಳ ನಿರ್ಮಾಣ, ತೆರೆದ ವ್ಯಾಯಾಮಗಳು, ಬಿದಿರು ಸಸಿಗಳು ನೆಡುವುದು ಇತ್ಯಾದಿ ಸಲಹೆಗಳು ಸಾರ್ವಜನಿಕರಿಂದ ಬಂದವು.
ಮೊದಲನೆ ಹಂತದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಪಾದಚಾರಿ ಮಾರ್ಗ ನವೀಕರಣ, ವಾಯುವಿಹಾರ ಮಾರ್ಗ ಅಭಿವೃದ್ಧಿ, ರಸ್ತೆ ಅಭಿವೃದ್ಧಿ, ನೀರು ಶುದ್ಧೀಕರಣ ಘಟಕ, ಸೈಕಲ್ ಟ್ರ್ಯಾಕ್, ಜಾಗಿಂಗ್ ಟ್ರಾ್ಯಕ್, ಕಮಲದ ಕೊಳ ಅಭಿವೃದ್ಧಿ, ಕೊಳದ ಸುತ್ತ ಸಂಚಾರ ಮಾರ್ಗ, ನಾಲಾ ಮತ್ತು ಸೇತುವೆಗಳ ಅಭಿವೃದ್ಧಿ ನಡೆಯಲಿದೆ. 2ನೇ ಹಂತದಲ್ಲಿ ಕರಗದ ಕುಂಟೆ ಅಭಿವೃದ್ಧಿ, ಜೌಗು ಪ್ರದೇಶದ ಅಭಿವೃದ್ಧಿ, ಕಾರಂಜಿಗಳು, ಆಸನಗಳ ವ್ಯವಸ್ಥೆ, ಕಲ್ಯಾಣಿ ಅಭಿವೃದ್ಧಿ, ಚಾನಲ್ಗಳ ಅಭಿವೃದ್ಧಿ, ಸಸಿಗಳನ್ನು ನೆಡುವುದು, ಅಂಗವಿಕಲರ ಸಂವೇದನಾ ಅಂಗಳ ಅಭಿವೃದ್ಧಿ, ಆಯುರ್ವೆದ ಉದ್ಯಾನ ನಿರ್ವಣ, ಹಿರಿಯ ನಾಗರಿಕರು ಹಾಗೂ ಮಕ್ಕಳಿಗಾಗಿ ಮೀಸಲಿಟ್ಟಿರುವ ಸ್ಥಳ ನವೀಕರಣ, ಯೋಗ ಪ್ರದೇಶ ಅಭಿವೃದ್ಧಿ, ಕಬ್ಬನ್ ಉದ್ಯಾನ ಇತಿಹಾಸ ಹಾಗೂ ಸಮರ್ಪಕ ಮಾಹಿತಿಗಳ ಫಲಕ ಅಳವಡಿಕೆ, ಸೈಕಲ್ ನಿಲ್ದಾಣ ಇತ್ಯಾದಿ ನಿರ್ಮಾಣವಾಗಲಿದೆ.